ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಏರ್ಪಡಿಸಿದ್ದ ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟಕ್ಕೆ ಮಂಗಳವಾರ ತೆರೆ ಬಿದ್ದಿದೆ.
ಭಾಷಾಂತರ ಕೇಂದ್ರದ ನಿರ್ದೇಶಕ ಎ. ಮೋಹನ ಕುಂಟಾರ್ ಮಾತನಾಡಿ, ‘ಯಾವುದೇ ತರಬೇತಿ ಕಮ್ಮಟಗಳ ಪರಿಪೂರ್ಣ ಭಾಷಾಂತರಕಾರರನ್ನು ಸೃಷ್ಟಿಸಲಾರದು. ತರಬೇತಿ ಕಾರ್ಯಕ್ರಮದಲ್ಲಿ ಪಡೆದ ತಿಳಿವಳಿಕೆಯನ್ನು ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಬಳಸಿದಾಗ ಪ್ರತಿಯೊಬ್ಬರಿಗೂ ಅದರ ಪ್ರಯೋಜನ ಸಿಗಬಹುದು’ ಎಂದು ಹೇಳಿದರು.
ಪದ್ಯ, ಗದ್ಯ, ವರದಿಗಾರಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಪ್ರಾಯೋಗಿಕವಾದ ಅನುಭವಗಳನ್ನು ಕೊಡಲಾಗಿದೆ. ಇದನ್ನು ನಿರಂತರವಾಗಿ ಕಲಿಕೆಯಲ್ಲಿ ಮುಂದುವರೆಸಿದರೆ ಔದ್ಯೋಗಿಕ ಬದುಕಿನಲ್ಲಿ ನೆರವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರಾದ ಟಿ.ಎಚ್. ಬಸವರಾಜ, ಅಬ್ದುಲ್ ಸಮದ್ ಕೊಟ್ಟೂರು, ಪವನಕುಮಾರ್ ಗೌಡ, ಐಕ್ಯುಎಸಿಯ ಸಹಾಯಕ ನಿರ್ದೇಶಕಿ ಡಿ. ಪ್ರಭಾ ಪಾಲ್ಗೊಂಡಿದ್ದರು. ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಾದ ನಾಗರಾಜ ಎಚ್.ಎ., ಬುಂಡ ಲಕ್ಷ್ಮಣ ನಾಯ್ಕ, ನಾಗರತ್ನ ಎಚ್., ಶೀತಲ್ ಬೇಕ್ವಾಡಕರ್, ಜಿ. ಪ್ರಭಾಲತಾ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಯಾದ ಹೊನ್ನಪ್ಪ, ಎಂ.ಎಸ್ಸಿ. ಯೋಗ ವಿದ್ಯಾರ್ಥಿನಿ ಜಯಶ್ರೀ ಮಾತನಾಡಿ, ಭಾಷಾಂತರದ ವಿಶಾಲವಾದ ಲೋಕವೊಂದನ್ನು ಈ ಮೂರು ದಿನಗಳಲ್ಲಿ ತೋರಿಸಿಕೊಡಲಾಗಿದೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.