ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ | ಮರಗಳಿಗೆ ಕೊಡಲಿ

Published : 30 ಜುಲೈ 2023, 5:44 IST
Last Updated : 30 ಜುಲೈ 2023, 5:44 IST
ಫಾಲೋ ಮಾಡಿ
Comments

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಮೊಹರಂ ಹಿನ್ನೆಲೆಯಲ್ಲಿ ನೂರಾರು ಮರಗಿಡಗಳಿಗೆ ಕೊಡಲಿ ಬಿದ್ದಿದೆ. ಭಕ್ತಿಯ ಪರಾಕಾಷ್ಠೆಯಲ್ಲಿ ಜನರು ಸಪೂರಾಗಿ ಬೆಳೆದಿದ್ದ ಮರಗಳನ್ನು ಕಡಿದಿದ್ದಾರೆ.

ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಕಡೆ ಮೊಹರಂ ಪೀರಲು ದೇವರು ಪ್ರತಿಷ್ಠಾಪಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಮಸೀದಿಯ ಎದುರು ನಿರ್ಮಿಸಿರುವ ಅಲಾವಿ ಕುಣಿಯಲ್ಲಿ ಕೆಂಡ ಹಾಯುವ ಆಚರಣೆ ನಡೆಯುತ್ತದೆ. ಮೊಹರಂ ಕೊನೆಯ ದಿನದ ಮುನ್ನದಿನ ಶುಕ್ರವಾರ ಕತ್ತಲರಾತ್ರಿಯಂದು ನೂರಾರು ಮರಗಳನ್ನು ಕಡಿದು ಅಲಾವಿ ಕುಣಿಯಲ್ಲಿ ಸುಟ್ಟು ಹಾಕಲಾಗಿದೆ.

ಪಟ್ಟಣದ ಹೊರ ವಲಯದ ಕೂಡ್ಲಿಗಿ ರಸ್ತೆಯ ಪಕ್ಕ ಬೆಳೆದಿರುವ ಬೃಹತ್ ಬೇವಿನ ಮರಗಳನ್ನು ಯಂತ್ರಗಳ ಸಹಾಯದಿಂದ ಬುಡವನ್ನೇ ಕತ್ತರಿಸಿ ಅಲಾವಿ ಕುಣಿಯಲ್ಲಿ ಹಾಕಿದ್ದಾರೆ. ಪಟ್ಟಣ, ತಾಲ್ಲೂಕಿನ ಬಲ್ಲಾಹುಣ್ಸಿ, ಹಂಪಾಪಟ್ಟಣ, ಬಸರಕೋಡು, ಕಿತ್ನೂರು, ಮಾಲವಿ, ಹಂಪಸಾಗರ, ಪಿಂಜಾರ್ ಹೆಗ್ಡಾಳ್, ಹನಸಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮರಗಳ ಹನನ ನಡೆದಿವೆ. ಅಂದಾಜಿನ ಪ್ರಕಾರ 100ಕ್ಕೂ ಹೆಚ್ಚು ಮರಗಳು ಸುಟ್ಟು ಕರಕಲಾಗಿವೆ.

ಅರಣ್ಯ ಇಲಾಖೆಯಿಂದ ಮೊಹರಂ ಹಬ್ಬದ ಮುಂಚೆ ಸಭೆ ಕರೆದು ಮರಗಳನ್ನು ಕಡಿಯದಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದರೆ, ಜತೆಗೆ ಕಾನೂನಿನ ಎಚ್ಚರಿಕೆ ನೀಡಿದ್ದರೆ ಮರಗಳ ಹನನ ತಡೆಯಬಹುದಿತ್ತು ಎನ್ನುತ್ತಾರೆ ಪರಿಸರ ಪ್ರೇಮಿಗಳು.

ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಕಚೇರಿಗಳನ್ನು ಸ್ಥಾಪಿಸಬೇಕು, ಸ್ಥಳಾಂತರಗೊಂಡಿರುವ ವಲಯ ಅರಣ್ಯ ಇಲಾಖೆಯ ಕಚೇರಿಯನ್ನು ಮತ್ತೆ ಪಟ್ಟಣದಲ್ಲಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಹೊರ ವಲಯದ ಕೂಡ್ಲಿಗಿ ರಸ್ತೆಯಲ್ಲಿ ಎರಡು ಬೃಹತ್ತಾದ ಬೇವಿನ ಗಿಡಗಳನ್ನು ಕತ್ತರಿಸಿರುವುದು
ಹಗರಿಬೊಮ್ಮನಹಳ್ಳಿ ಹೊರ ವಲಯದ ಕೂಡ್ಲಿಗಿ ರಸ್ತೆಯಲ್ಲಿ ಎರಡು ಬೃಹತ್ತಾದ ಬೇವಿನ ಗಿಡಗಳನ್ನು ಕತ್ತರಿಸಿರುವುದು
ಮರಗಳನ್ನು ಕಡಿದಿರುವ ಕುರಿತಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಸಿಬ್ಬಂದಿಗೂ ಸೂಚಿಸಲಾಗುವುದು.
-ಶಿವಕುಮಾರ್ ಹಿಟ್ನಾಳ್ ವಲಯ ಅರಣ್ಯಾಧಿಕಾರಿ
ಮರಗಳನ್ನು ಕಡಿಯದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಬೆಳೆದು ನಿಂತ ಮರಗಳನ್ನು ದೇವರ ಹೆಸರಿನಲ್ಲಿ ಸುಡುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ ಆಮ್ಲಜನಕದ ಕೊರತೆಯುಂಟಾಗುತ್ತದೆ.
- ಸಮದ್ ಕೊಟ್ಟೂರು ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT