ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಅಣೆಕಟ್ಟೆ: ಒಂದೇ ದಿನದಲ್ಲಿ 2 ಅಡಿ ನೀರು ಏರಿಕೆ

Published 10 ಜುಲೈ 2023, 4:28 IST
Last Updated 10 ಜುಲೈ 2023, 4:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮುಂಗಾರು ಮಳೆ ವಿಳಂಬದಿಂದ ಸೊರಗಿ ಹೋಗಿದ್ದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 17,061 ಕ್ಯುಸೆಕ್‌ಗೆ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ ಅಣೆಕಟ್ಟೆಯ ನೀರಿನ ಮಟ್ಟ ಎರಡು ಅಡಿಗಳಷ್ಟು ಹೆಚ್ಚಿದೆ.

ಅಣೆಕಟ್ಟೆಯಲ್ಲಿ ಭಾನುವಾರ ನೀರಿನ ಮಟ್ಟ 1576.72 ಅಡಿಗಳಷ್ಟು ಇತ್ತು. ಸೋಮವಾರ ಅದು 1,578.79 ಅಡಿಗೆ ಹೆಚ್ಚಳವಾಗಿದೆ. ಜಲಾಶಯದ ನೀರಿನ ಸಂಗ್ರಹ ಭಾನುವಾರ 3.08 ಟಿಎಂಸಿ ಅಡಿಗಳಷ್ಟು ಇದ್ದರೆ, ಸೋಮವಾರ ಅದು 3.91 ಟಿಎಂಸಿ ಅಡಿಯಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ 80.55 ಟಿಎಂಸಿ ಅಡಿಗಳಷ್ಟು ಇತ್ತು ಹಾಗೂ ಅಣೆಕಟ್ಟೆಯ ನೀರಿನ ಮಟ್ಟ 1622.22 ಅಡಿಗಳಷ್ಟು ಇತ್ತು (ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ).

ಮುಂಗಾರು ಮಳೆ ಸುಮಾರು ಒಂದು ತಿಂಗಳಷ್ಟು ವಿಳಂಬವಾಗಿದ್ದರಿಂದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿದಿತ್ತು. ಒಟ್ಟು ಸಂಗ್ರಹ 2 ಟಿಎಂಸಿ ಅಡಿಗೆ ಕುಸಿದರೆ ಡೆಡ್‌ ಸ್ಟೋರೇಜ್‌ ಎಂದು ಘೋಷಿಸುವ ನಿರೀಕ್ಷೆ ಇತ್ತು. ಜುಲೈ 3ರಂದು ಜಲಾಶಯದ ನೀರಿನ ಸಂಗ್ರಹ ಪ್ರಮಾಣ 3.03 ಟಿಎಂಸಿ ಅಡಿಗೆ ತಲುಪಿತ್ತು. ಇದು ಈ ವರ್ಷದ ಕನಿಷ್ಠ ನೀರಿನ ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT