ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ 18ನೇ ಕ್ರೆಸ್ಟ್ಗೇಟ್ ಅಳವಡಿಕೆ ಬುಧವಾರ ಸಂಜೆ ಪೂರ್ಣಗೊಂಡಿದ್ದು, 20 ಮತ್ತು 27ನೇ ಗೇಟ್ಗಳ ಅಳವಡಿಕೆ ಕಾರ್ಯ ಆರಂಭವಾಗಿದೆ.

ಡಿ.24ರಂದು ಗೇಟ್ ಅಳವಡಿಕೆ ಕೆಲಸ ಆರಂಭವಾಗಿತ್ತು. 15 ದಿನಗಳಲ್ಲಿ ಮೊದಲ ಗೇಟ್ ಅವವಡಿಕೆ ಯಶಸ್ವಿಯಾಗಿ ಕೊನೆಗೊಂಡಂತಾಗಿದೆ.

‘ಈ ಗೇಟ್ಗೆ ಚೈನ್ಲಿಂಕ್ ಅನ್ನು ಗುರುವಾರ ಅಳವಡಿಸಲಾಗುವುದು, ಬಳಿಕ ಗೇಟ್ ಅನ್ನು ಎತ್ತುವ, ಇಳಿಸುವ ಪ್ರಯೋಗ ನಡೆಯಲಿದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಈಗಾಗಲೇ ಮೂರು ಕ್ರೆಸ್ಟ್ಗೇಟ್ಗಳನ್ನು ಕತ್ತರಿಸಿ ತೆಗೆಯಲಾಗಿದೆ. ಸದ್ಯ ಎರಡು ತಂಡಗಳು ಹಳೆ ಗೇಟ್ ಕತ್ತರಿಸಿ ತೆಗೆಯುವ ಹಾಗೂ ಇನ್ನೆರಡು ತಂಡಗಳು ಹೊಸ ಗೇಟ್ ಅಳವಡಿಸುವ ಕೆಲಸದಲ್ಲಿ ತೊಡಗಿವೆ. ಮೊದಲ ಗೇಟ್ ಯಶಸ್ವಿಯಾಗಿ ಅಳವಡಿಕೆ ಆಗಿರುವ ಕಾರಣ ಮುಂದಿನ ಗೇಟ್ ಅಳವಡಿಕೆ ಕೆಲಸ ಸ್ವಲ್ಪ ವೇಗವಾಗಿ ನಡೆದು ಎಂಟು ದಿನದೊಳಗೆ ಒಂದು ಗೇಟ್ ಅಳವಡಿಕೆ ಸಾಧ್ಯವಾಗಬಹುದು ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.