ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್ಗೇಟ್ ಅಳವಡಿಸುವ ಕೆಲಸಕ್ಕೆ ಶನಿವಾರ ಸ್ವಲ್ಪ ವೇಗ ಸಿಕ್ಕಿದ್ದು, ಗರ್ಡರ್ಗಳನ್ನು ಅಳವಡಿಸುವ ಕೆಲಸ ಆರಂಭವಾಯಿತು.

ಗುರುವಾರ ಎಂಡ್ ಗೇಟ್ ಅಳವಡಿಸಲಾಗಿತ್ತು. ಆದರೆ ಹೊಸ ವಿನ್ಯಾಸದಲ್ಲಿ ಸಿದ್ಧಪಡಿಸಲಾಗಿರುವ ಗರ್ಡರ್ಗಳು ಕೂರುವ ಸ್ಥಳ, ಮತ್ತಿತರ ವಿಚಾರಗಳಲ್ಲಿ ಬಹಳ ಲೆಕ್ಕಾಚಾರ ಮತ್ತು ಸಿದ್ಧತೆಗಳು ಇದ್ದ ಕಾರಣ ಶುಕ್ರವಾರ ಅದನ್ನು ವ್ಯವಸ್ಥೆಗೊಳಿಸಿ, ಶನಿವಾರ ಬೃಹತ್ ಕ್ರೇನ್ ಮೂಲಕ ಗರ್ಡರ್ ತಂದು ಇಡುವ ಕೆಲಸ ನಡೆಯಿತು. ಒಟ್ಟು ಮೂರು ಗರ್ಡರ್ಗಳನ್ನು ಕೂರಿಸಬೇಕಿದ್ದು, ಮೊದಲ ಗರ್ಡರ್ ಅಳವಡಿಕೆ ಕೆಲಸ ಇದೀಗ ನಡೆದಿದೆ.

‘ಒಂದು ಗೇಟ್ನಲ್ಲಿ ಮೂರು ಗರ್ಡ್ರ್ಗಳ ಸಹಿತ 12 ಭಾಗಗಳು ಇವೆ. ಎಲ್ಲವನ್ನೂ ಪ್ರತ್ಯೇಕವಾಗಿ ತಂದು ಜೋಡಿಸಲಾಗುತ್ತದೆ. ಆರಂಭದಲ್ಲಿ ಕೆಲವು ಗೇಟ್ಗಳನ್ನು ಅಳವಡಿಸಲು ಆರರಿಂದ ಏಳು ದಿನ ಬೇಕಾಗಬಹುದು, ಬರಬರುತ್ತ ಅದು ವೇಗವಾಗಿ ಸಾಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.

ಈ ಮಧ್ಯೆ, ಆಂಧ್ಯಪ್ರದೇಶದ ತುಂಗಭದ್ರಾ ಮಂಡಳಿಯ ಸದಸ್ಯ ಕೆ.ನರಸಿಂಹಮೂರ್ತಿ ಅವರು ಶನಿವಾರ ಅಣೆಕಟ್ಟೆಗೆ ಬಂದು ಕಾಮಗಾರಿ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.