ಹೊಸಪೇಟೆ (ವಿಜಯನಗರ); ಜಿಲ್ಲೆಯಾದ್ಯಂತ ನಡೆಯಲಿರುವ ಜಾತ್ರೆ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.
ಈ ಸಂಬಂಧ ಎರಡೂ ಸಂಘಟನೆಗಳು ಸೋಮವಾರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿವೆ.
ದೇವಸ್ಥಾನದ ಪರಿಸರದಲ್ಲಿ ಹಿಂದೂಗಳಲ್ಲದವರಿಗೆ ಮಳಿಗೆ, ವಸತಿಗೃಹ, ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕೊಡಬಾರದು. ಈಗಾಗಲೇ ಅನುಮತಿ ಕೊಟ್ಟಿದ್ದಲ್ಲಿ ರದ್ದುಪಡಿಸಬೇಕು. ಹಿಂದೂ ದೇವರುಗಳಲ್ಲಿ ಶ್ರದ್ಧೆ, ಭಕ್ತಿಯಿಲ್ಲದೆ ಅಪಚಾರವೆಸಗಬಹುದು. ಶಾಂತಿ ಕದಡಬಹುದು ಎಂದು ತಿಳಿಸಿದ್ದಾರೆ.
ಮುಖಂಡರಾದ ನರಸಿಂಹಮೂರ್ತಿ, ಎಂ. ರಾಜ, ಕೊಟ್ರೇಶ, ಎನ್. ಪರಶುರಾಮ, ನಾಗರಾಜ, ಯಮನೂರ ನಾಯ್ಕ, ಉಮೇಶ, ರವಿಕುಮಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.