ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ನಂದಿನಿ ಮಾರಾಟ ಮಳಿಗೆ ಅಧಿಕಾರಿ ಅಮಾನತು

Published 28 ಸೆಪ್ಟೆಂಬರ್ 2023, 15:45 IST
Last Updated 28 ಸೆಪ್ಟೆಂಬರ್ 2023, 15:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ಅವಧಿ ಮೀರಿದ ನಂದಿನಿ ಉತ್ಪನ್ನಗಳನ್ನು ಸಗಟು ಮಾರಾಟಗಾರರಿಗೆ ಪೂರೈಸಿದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ದಾವಣಗೆರೆ ಮಾರಾಟ ಮಳಿಗೆಯ ಸಹಾಯಕ ನಿರ್ದೇಶಕ ಪೂಜಾರಿ ಪ್ರಭುರಾಜ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳದ ಹೆಚ್ಚುವರಿ ನಿರ್ದೇಶಕರು ತಿಳಿಸಿದ್ದಾರೆ.

ಪಟ್ಟಣದ ನಂದಿನಿ ಪಾರ್ಲರ್‌ಗೆ ಮಂಗಳವಾರ ಅವಧಿ ಮೀರಿದ ನಂದಿನಿ ಉತ್ಪನ್ನಗಳು ಸರಬರಾಜು ಆಗಿದ್ದವು. ಸಗಟು ಮಾರಾಟಗಾರ ರವಿಕುಮಾರ್ ಸೊಪ್ಪಿನ ಎಂಬವರು, ‘ಅವಧಿ ಮೀರಿದ ಉತ್ಪನ್ನಗಳ ಮಾರಾಟಕ್ಕೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT