ಹೊಸಪೇಟೆ: ನಗರದಲ್ಲಿ 1,108 ವಾರಗಳಿಂದ ಸಾಮೂಹಿಕ ವಿಷ್ಣು ಸಹಸ್ರಮಾನ ಪಠಣವನ್ನು ಸಂಘಟಿಸುತ್ತಿರುವ ವಿಷ್ಣು ಸೇವಾ ಸಂಸ್ಥೆಯ 21ನೇ ವಾರ್ಷಿಕೋತ್ಸವ ಜಂಬುನಾಥ ರಸ್ತೆಯ ಶ್ರೀಕೃಷ್ಣ ಮಠದಲ್ಲಿ ಭಾನುವಾರ ನಡೆಯಿತು.

ವಿಷ್ಣು ಸಹಸ್ರನಾಮ ಹೋಮ, ಸಾಮೂಹಿಕ ವಿಷ್ಣು ಸಹಸ್ರನಾಮ ನಡೆದ ಬಳಿಕ ಸಭಾ ಕಾರ್ಯಕ್ರಮದಲ್ಲಿ 16 ಸಾವಿರ ಭಾಮಿನಿ ಷಟ್ಪದಿಯಲ್ಲಿ ‘ಶ್ರೀಕೃಷ್ಣ ಲೀಲಾಮೃತಂ’ ಮಹಾಕಾವ್ಯ ರಚಿಸಿದ ನಗರದ ಹಿರಿಯ ಕವಿ ರಂಗೋಪಂತ ನಾಗರಾಜರಾಯರು ತಮ್ಮ ಸಾಹಿತ್ಯ ಸೇವೆಯ ಕುರಿತು ಮಾಹಿತಿ ನೀಡಿದರು.

ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಹಾಗೂ ಮಕ್ಕಳಲ್ಲಿ, ಕುಟುಂಬದಲ್ಲಿ ಉತ್ತಮ ಸಂಸ್ಕಾರ ಮೂಡಿಸುವಲ್ಲಿ ವಿಷ್ಣು ಸೇವಾ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ ಎಂದರು.

ಸಂಸ್ಥೆಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಲೀಲಾ ಕಲಾಭೂಮಿ ಮಕ್ಕಳ ಭಗವದ್ಗೀತೆ ಪ್ರವಚನ, ಅನಘಾ, ಸಿಂಚನಾ ಕರ್ಣಂ ಅವರ ಭರತನಾಟ್ಯ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಂಸ್ಥೆಯ ಗೌರವಾಧ್ಯಕ್ಷ ಯು.ನರಸಿಂಹಮೂರ್ತಿ, ಅಧ್ಯಕ್ಷ ಪ್ರೊ.ಯು.ರಾಘವೇಂದ್ರ ರಾವ್, ಕಾರ್ಯದರ್ಶಿ ವಾದಿರಾಜ ಭಟ್, ಉಪಾಧ್ಯಕ್ಷ ಗುರುರಾಜ ಭಟ್, ನರಸಿಂಹಾಚಾರ್, ಶ್ರೀಪತಿ, ರಾಘವೇಂದ್ರ ಉಪಾಧ್ಯಾಯ, ವಾಣಿ ಆಚಾರ್, ಸುಧಾ ವಾದಿರಾಜ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.