ಗುರುವಾರ , ಜನವರಿ 27, 2022
27 °C

ವಿಜಯನಗರ ಜಿಲ್ಲೆಯಲ್ಲಿ ವೀಕೆಂಡ್‌ ಕರ್ಫ್ಯೂ ಉಲ್ಲಂಘನೆ: 992 ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹೊಸಪೇಟೆ (ವಿಜಯನಗರ): ವೀಕೆಂಡ್‌ ಕರ್ಫ್ಯೂ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸರು ಭಾನುವಾರ ಜಿಲ್ಲೆಯಾದ್ಯಂತ 992 ಪ್ರಕರಣ ದಾಖಲಿಸಿಕೊಂಡು ₹1.61 ಲಕ್ಷ ದಂಡ ಹಾಕಿದ್ದಾರೆ. 55 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೋಟಾರ್‌ ವಾಹನ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 263 ಪ್ರಕರಣ ದಾಖಲಿಸಿ, ₹88,100 ದಂಡ ಹಾಕಿದ್ದಾರೆ. ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ 121 ಪ್ರಕರಣ ದಾಖಲಿಸಿ, ₹36,400 ದಂಡ ಹಾಕಿ‌ 1 ವಾಹನ ವಶಕ್ಕೆ ಪಡೆದಿದ್ದಾರೆ.

ಕೂಡ್ಲಿಗಿ ಉಪವಿಭಾಗ ವ್ಯಾಪ್ತಿಯಲ್ಲಿ 52 ಪ್ರಕರಣ, ₹19,600 ದಂಡ, 13 ವಾಹನ ವಶ, ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ 90 ಪ್ರಕರಣ ದಾಖಲಿಸಿಕೊಂಡು ₹32,100 ದಂಡ ಹಾಕಿ 41 ವಾಹನ ವಶಪಡಿಸಿಕೊಂಡಿದ್ದಾರೆ. ಮಾಸ್ಕ್‌ ಧರಿಸದೇ ಓಡಾಡುತ್ತಿದ್ದ 729 ಜನರ ವಿರುದ್ಧ ಪ್ರಕರಣ ದಾಖಲಿಸಿ, ₹72,900 ದಂಡ ಹಾಕಿದ್ದಾರೆ.

ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಿಸಿದರೆ, ಕೂಡ್ಲಿಗಿ ಉಪವಿಭಾಗದಲ್ಲಿ ಕಡಿಮೆ ಪ್ರಕರಣಗಳನ್ನು ದಾಖಲಿಸಿದ್ದಾರೆ.  ಹೊಸಪೇಟೆಯಲ್ಲಿ 399 ಪ್ರಕರಣ ದಾಖಲಿಸಿ, ₹39,900 ದಂಡ, ಹರಪನಹಳ್ಳಿಯಲ್ಲಿ 178 ಪ್ರಕರಣ, ₹17,800 ದಂಡ, ಕೂಡ್ಲಿಗಿಯಲ್ಲಿ 152 ಪ್ರಕರಣ ಹಾಕಿ, ₹15,200 ದಂಡ ಹಾಕಿದ್ದಾರೆ.

ಶನಿವಾರ ಜಿಲ್ಲೆಯಾದ್ಯಂತ ಒಟ್ಟು 757 ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 31 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿತ್ತು.

ಎರಡನೇ ದಿನ ಹೆಚ್ಚಿನ ಜನಸಂಚಾರ:
ವಾರಾಂತ್ಯದ ಕರ್ಫ್ಯೂ ಎರಡನೇ ದಿನವಾದ ಭಾನುವಾರ ನಗರದಲ್ಲಿ ಹೆಚ್ಚಿನ ಜನಸಂಚಾರ ಕಂಡು ಬಂತು. ಬೆಳಿಗ್ಗೆ ಹನ್ನೊಂದು ಗಂಟೆಯವರೆಗೆ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಶನಿವಾರಕ್ಕಿಂತ ಭಾನುವಾರ ಹೆಚ್ಚಿನ ಜನರ ಓಡಾಟ ಇತ್ತು. ಮಧ್ಯಾಹ್ನ ಬೆರಳೆಣಿಕೆಯ ಜನ ಕಂಡು ಬಂದರು.

ಪುನಃ ಸಂಜೆ 5ರಿಂದ ಎಂಟು ಗಂಟೆಯವರೆಗೆ ಎಲ್ಲೆಡೆ ಜನ ಯಾವುದೇ ಅಡೆತಡೆಯಿಲ್ಲದೆ ಓಡಾಡಿದರು. ಸಾರಿಗೆ ಸಂಸ್ಥೆಯ ಬಸ್ಸು, ಆಟೊ, ಟ್ಯಾಕ್ಸಿಗಳು ಸಂಚರಿಸಿದವು. ಬಸ್‌ ನಿಲ್ದಾಣದಲ್ಲಿ ಹೆಚ್ಚಿಗೆ ಜನ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಎಂಬಂತೆ ಕೆಲವು ಕಡೆಗಳಿಗೆ ಬಸ್‌ಗಳು ಸಂಚರಿಸಿದವು. ಹೋಟೆಲ್‌, ಮೆಡಿಕಲ್‌, ಹಣ್ಣಿನಂಗಡಿಗಳು ಬಾಗಿಲು ತೆರೆದಿದ್ದವು. ನಗರದ ಪ್ರಮುಖ ವೃತ್ತಗಳಲ್ಲಿ ನಿಂತಿದ್ದ ಪೊಲೀಸರು ವಾಹನ ಸವಾರರನ್ನು ತಡೆದು ವಿಚಾರಿಸುತ್ತಿದ್ದರು. ಮಾಸ್ಕ್‌ ಧರಿಸದೇ, ಅನಗತ್ಯ ಓಡಾಡುತ್ತಿದ್ದವರಿಗೆ ದಂಡ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು