ಶುಕ್ರವಾರ, ಆಗಸ್ಟ್ 19, 2022
22 °C

ವಿಜಯನಗರ: ಬಾವಿಗೆ ಬಿದ್ದ ಕರಡಿ ರಕ್ಷಣೆಗೆ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಇಲ್ಲಿನ ಮಡ್ಲಾಕನಹಳ್ಳಿ ಗ್ರಾಮದ ಪಾಳು ಬಾವಿಯೊಳಗೆ ಬಿದ್ದಿರುವ ಕರಡಿ ರಕ್ಷಣೆಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದಾರೆ.

ಕರಡಿಗೆ ಅರವಳಿಕೆ ಕೊಟ್ಟು ಮೇಲೆ ತರಲು ಮುಂದಾಗಿದ್ದಾರೆ. ಗ್ರಾಮಕ್ಕೆ ಸೋಮವಾರ ಬೆಳಿಗ್ಗೆ ಮೂರು ಕರಡಿಗಳು ಬಂದಿದ್ದವು. ಇದರಲ್ಲಿ ಒಂದು ಕರಡಿ ಮನೆಯೊಳಗೆ ನುಗ್ಗಿತ್ತು. ಅರಣ್ಯ ಇಲಾಖೆಯವರು ಬಲೆ ಹಾಕಿ ಹಿಡಿಯಲು ಮುಂದಾಗಿದ್ದರು. ಆದರೆ, ತಪ್ಪಿಸಿಕೊಂಡು ಓಡುವಾಗ ಪಾಳು ಬಾವಿಗೆ ಬಿದ್ದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು