ಶುಕ್ರವಾರ, ಮೇ 14, 2021
32 °C

ನಕಲಿ ಕೋವಿಡ್ ನೆಗೆಟಿವ್‌ ವರದಿ ಕೊಡುತ್ತಿದ್ದ ಯುವಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಸಾರ್ವಜನಿಕರಿಗೆ ನಕಲಿ ಕೊರೊನಾ ನೆಗೆಟಿವ್‌ ವರದಿ ಕೊಡುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿವು ಬಂಧಿತ ಯುವಕ. ‘ನಗರದ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪಕ್ಕದ ರಸ್ತೆಯಲ್ಲಿ ಜೆರಾಕ್ಸ್‌ ಮಳಿಗೆ ನಡೆಸುತ್ತಿದ್ದ ಶಿವು, ದೂರದ ಊರಿಗೆ ಹೋಗುವವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್‌ ಪೋರ್ಟಲ್‌ ಮೂಲಕ ನೆಗೆಟಿವ್‌ ವರದಿ ಬಂದವರ ಐ.ಡಿ ಬಳಸಿ ನಕಲಿ ವರದಿ ತೆಗೆದುಕೊಡುತ್ತಿದ್ದ.

ಈ ಕುರಿತು ತಾಲ್ಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್‌ ಅವರು ನೀಡಿದ ದೂರಿನ ಮೇರೆಗೆ ಯುವಕನನ್ನು ಮಂಗಳವಾರ ವಶಕ್ಕೆ ಪಡೆದು, ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೆರಾಕ್ಸ್‌ ಮಳಿಗೆಯಿಂದ ಹಾರ್ಡ್‌ ಡಿಸ್ಕ್‌ ಸೇರಿದಂತೆ ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಶ್ರೀನಿವಾಸ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು