ಆಲಮಟ್ಟಿ: ಜಮಖಂಡಿ, ಮುಧೋಳ ತಾಲ್ಲೂಕಿನ ಕೃಷ್ಣಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಆಲಮಟ್ಟಿ ಜಲಾಶಯದಿಂದ 3.25 ಲಕ್ಷ ಕ್ಯುಸೆಕ್ ನೀರನ್ನು ಶನಿವಾರ ತಡರಾತ್ರಿಯಿಂದ ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದ ಮಟ್ಟ ಇಳಿಕೆಯಾದರೂ ಅಚ್ಚರಿ ಎಂಬಂತೆ ಹಿನ್ನೀರಿನ ಹಿಪ್ಪರಗಿ ಜಲಾಶಯದ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿದೆ. ಹಿಪ್ಪರಗಿ ಜಲಾಶಯದ ಎಲ್ಲ ಗೇಟ್ಗಳನ್ನು ತೆರೆದರೂ ನೀರು ಸರಾಗವಾಗಿ ಹರಿದು ಆಲಮಟ್ಟಿ ಜಲಾಶಯದತ್ತ ಬರುತ್ತಿಲ್ಲ, ಇದರಿಂದ ಹಿಪ್ಪರಗಿ ಜಲಾಶಯದ ಮಟ್ಟ ಏರುತ್ತಿದೆ. ಅದರ ಕೆಳ ಬಾಜು ಇರುವ ಆಲಮಟ್ಟಿ ಜಲಾಶಯದ ಮಟ್ಟ 515.5 ಮೀ ಇಳಿಕೆಯಿದ್ದರೂ ನೀರು ಸರಾಗವಾಗಿ ಬರುತ್ತಿಲ್ಲ. ಇದರಿಂದ ಹಿಪ್ಪರಗಿ ಜಲಾಶಯದ ಹಿನ್ನೀರಿನ ಜಮಖಂಡಿ, ತೇರದಾಳ, ಮುಂಭಾಗದ ಮುಧೋಳ ತಾಲ್ಲೂಕಿನ ಕೃಷ್ಣಾ ನದಿಯಲ್ಲಿಯೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಘಟಪ್ರಭಾ ನದಿಯ ನೀರು ಕೂಡ ಆಲಮಟ್ಟಿ ಹಿನ್ನೀರಿನ ಚಿಕ್ಕ ಸಂಗಮದ ಬಳಿಯೂ ಕೃಷ್ಣಾ ನದಿಗೆ ಬಂದು ಸೇರುವಲ್ಲಿಯೂ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಪ್ರವಾಹ ಉಂಟಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಒಳಹರಿವಿಗಿಂತ ಹೊರಹರಿವು ಹೆಚ್ಚಿಸಿದ್ದರಿಂದ 519.6 ಮೀ ಎತ್ತರದ ಆಲಮಟ್ಟಿ ಜಲಾಶಯದ ಮಟ್ಟ 515.68 ಮೀಟರ್ಗೆ ಇಳಿಕೆಯಾಗಿದೆ. 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 69 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಶೇ 56ರಷ್ಟು ಮಾತ್ರ ನೀರಿದೆ. ಸೋಮವಾರ ಜಲಾಶಯದ ಮಟ್ಟ ಇನ್ನಷ್ಟು ಕುಸಿಯಲಿದೆ. 2019 ಮತ್ತು 2021 ರಲ್ಲಿ ಪ್ರವಾಹ ಸ್ಥಿತಿ ಉಂಟಾದಾಗಲೂ ಆಲಮಟ್ಟಿ ಜಲಾಶಯದ ಮಟ್ಟ ಇಷ್ಟು ಕೆಳಗೆ ಕುಸಿದಿರಲಿಲ್ಲ. ಆದರೆ ಇದೇ ಮೊದಲ ಬಾರಿ ಜಲಾಶಯದ ಮಟ್ಟ ಒಳಹರಿವು ಇದ್ದಾಗಲೂ 515.68 ಮೀ ಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಹಾ ಮಳೆ ಹೆಚ್ಚಳ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕರ್ನಾಟಕದ ಕಳ್ಳೋಳ ಬ್ಯಾರೇಜ್ ಬಳಿ ಭಾನುವಾರ ಸಂಜೆ ಕೃಷ್ಣಾ ನದಿಗೆ 2,86,453 ಕ್ಯುಸೆಕ್ ಹರಿವು ಇದೆ. ಘಟಪ್ರಭಾ ನದಿಯ ಅಚ್ಚುಕಟ್ಟು ವ್ಯಾಪ್ತಿಯ ಲೊಳಸುರ ಬ್ಯಾರೇಜ್ ಬಳಿ ಘಟಪ್ರಭಾ ನದಿಯ ಹರಿವು 80,775 ಕ್ಯುಸೆಕ್ ಇದೆ. ಎರಡೂ ನದಿಗಳ ನೀರು ಹರಿದು ಬಂದರೆ ಆಲಮಟ್ಟಿ ಜಲಾಶಯದ ಒಳಹರಿವು 3 ಲಕ್ಷ ಕ್ಯುಸೆಕ್ ದಾಟಬೇಕು. ಭಾನುವಾರ ಸಂಜೆ ಆಲಮಟ್ಟಿ ಜಲಾಶಯದ ಒಳಹರಿವು 2,68,222 ಕ್ಯುಸೆಕ್ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.