ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ಸಾವಿರ ಹೆಣ್ಣು ಕರುಗಳಿಗೆ ಕಂದು ರೋಗ ಲಸಿಕೆ

ಸಂಸದ ರಮೇಶ ಜಿಗಜಿಣಗಿ ಹೇಳಿಕೆ
Last Updated 6 ಸೆಪ್ಟೆಂಬರ್ 2021, 13:56 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರಜಾರಿಗೆ ತಂದಿರುವಕರುಗಳ ಕಂದು ರೋಗ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯ 37 ಸಾವಿರ ಹೆಣ್ಣು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಇದರಿಂದರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಭೂತನಾಳ ಕೆರೆಯ ಹತ್ತಿರದ ಗೋಶಾಲೆಯಲ್ಲಿ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಆಕಳು ಮತ್ತು ಎಮ್ಮೆಗಳ ಹೆಣ್ಣು ಕರುಗಳ ರಾಷ್ಟ್ರೀಯ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಕರುವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮದಡಿ ರೈತರ ಮನೆಬಾಗಿಲಿಗೆ ತೆರಳಿ ದೇಶೀಯ ಹಾಗೂ ವಿದೇಶಿಯ ರಾಸುಗಳ ವೀರ್ಯದೊಂದಿಗೆ ದೇಶಿಯ ರಾಸುಗಳನ್ನು ಉಚಿತವಾಗಿ ಉನ್ನತೀಕರಿಸುವ ಯೋಜನೆ ದೇಶದ 604 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ ಎಂದರು.

ಕಾಲು ಮತ್ತು ಬಾಯಿ ಬೇನೆ ರೋಗದ ವಿರುದ್ಧ ಜಿಲ್ಲೆಯಲ್ಲಿ ಸುಮಾರು 3.75 ಲಕ್ಷ ದನಕರುಗಳಿಗೆ ವರ್ಷಕ್ಕೆ ಎರಡು ಬಾರಿ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ ಎಂದರು.

ದೇಶದಲ್ಲಿಯ ಎಲ್ಲ ರಾಸುಗಳಿಗೆ ಗುರುತಿನ ಕಿವಿಯೋಲೆ ಹಾಕುವಲ್ಲಿ ಪಶುಪಾಲನಾ ಇಲಾಖೆ ಯಶಸ್ವಿ ಹಾದಿಯಲ್ಲಿದೆ. ಕಿವಿಯೋಲೆ ಅಳವಡಿಸಿದಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಗೌರವಧನವನ್ನು ಕೂಡಾ ನೀಡುತ್ತಾ ಬಂದಿದೆ ಎಂದು ಹೇಳಿದರು.

ಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ‌.‌ಪ್ರಾಣೇಶ.ಜಾಗೀರದಾರ ಮಾತನಾಡಿ ರಾಜ್ಯದಲ್ಲಿ 2021-22 ನೇ ಸಾಲಿನಲ್ಲಿ ಕಂದು ರೋಗ ನಿಯಂತ್ರಣ ಯೋಜನೆಯಡಿಯಲ್ಲಿ ಸಂಪೂರ್ಣ ರೋಗ ಮುಕ್ತ ಮಾಡಲು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಎಂ.ಸಿ.ಅರಕೇರಿ, ಸೆಪ್ಟಂಬರ್‌ 6 ರಿಂದ ಕಂದು ರೋಗ ನಿಯಂತ್ರಣ ಕಾರ್ಯಕ್ರಮ ವಿಜಯಪುರ ಜಿಲ್ಲೆಯಲ್ಲೂ 15 ದಿನ ನಡೆಯಲಿದೆ ಎಂದು ಅವರು ಹೇಳಿದರು.

ಪಾಲಿಕ್ಲಿನಿಕ್‌ ಉಪ ನಿರ್ದೇಶಕ ಡಾ.ಎಸ್.ಪಿ.ಕುಂಬಾರ, ಹಿರಿಯ ಪಶು ವೈದ್ಯಾಧಿಕಾರಿ ಕಾರಜೊಳ, ಡಾ.ಮುತ್ತಣ್ಣಗೌಡ ಬಿರಾದಾರ, ಹಿರಿಯ ಪಶು ವೈದ್ಯಾಧಿಕಾರಿ ತಿಡಗುಂದಿ, ಡಾ.ರಮೇಶ ರಾಠೋಡ, ಡಾ.ಪಂಚಾಕ್ಷರಿ, ಎ.ಆರ್‌.ಸೂರ್ಯವಂಶಿ, ನಮ್ರತಾ ರಾಠೋಡ, ಭಾಗ್ಯಶ್ರೀ, ಆನಂದ ಬುರುಡ, ಜೀವನ್, ವಿನಾಯಕ ಗುಡದಿನ್ನಿ ಉಪಸ್ಥಿತರಿದ್ದರು.

***

ಕೃತಕ ಗರ್ಭಧಾರಣಾ ಕಾರ್ಯಕರ್ತರು ಹಾಗೂ ಲಸಿಕಾದಾರರು ಜಾನುವಾರುಗಳಿಗೆ ಕಿವಿಯೋಲೆ ಹಾಕಿದ ಬಳಿಕವೇ ಲಸಿಕೆ ಕೈಗೊಳ್ಳಬೇಕು

ರಮೇಶ ಜಿಗಜಿಣಗಿ,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT