ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ ಜಲಾಶಯ ಸುರಕ್ಷಿತ: ಎಂ.ಡಿ ಮೋಹನರಾಜು

Published 14 ಆಗಸ್ಟ್ 2024, 15:55 IST
Last Updated 14 ಆಗಸ್ಟ್ 2024, 15:55 IST
ಅಕ್ಷರ ಗಾತ್ರ

ಆಲಮಟ್ಟಿ: ‘ಆಲಮಟ್ಟಿ ಜಲಾಶಯ ಸುರಕ್ಷಿತವಾಗಿದ್ದು, ಗೇಟ್ ಸೇರಿದಂತೆ ಯಾವುದೇ ತೊಂದರೆಯಿಲ್ಲ. ಜನರಲ್ಲಿ ಯಾವುದೇ ಆತಂಕವೂ ಬೇಡ’ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜು ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಿಗಮದ ನೌಕರರಿಗಾಗಿ ಬುಧವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

‘ಆಲಮಟ್ಟಿ ಜಲಾಶಯದ ಗೇಟ್ ಮೇಲ್ವಿಚಾರಣೆ ಮುಂಗಾರು ಹಂಗಾಮಿಗೂ ಮೊದಲು ನಡೆಸಲಾಗಿದೆ. ಈಗ ಸರ್ಕಾರ ಮತ್ತೊಮ್ಮೆ ಜಲಾಶಯವನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಆ ಪ್ರಕಾರ ಎರಡು ದಿನಗಳಲ್ಲಿ ಮತ್ತೊಮ್ಮೆ ಕೂಲಂಕಷ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಆಲಮಟ್ಟಿಯಲ್ಲಿ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಇದೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಜಲಾಶಯದ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ 100ಕ್ಕೂ ಅಧಿಕ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಪ್ರಧಾನ ಕಾರ್ಯದರ್ಶಿ ವೈ.ಎಂ. ಪಾತ್ರೋಟ, ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಎಸ್. ಪಾಟೀಲ, ವಿ.ಆರ್. ಹಿರೇಗೌಡರ, ಡಿಎಫ್ಒ ರಾಜಣ್ಣ ನಾಗಶೆಟ್ಟಿ, ಶರಣಪ್ಪ ಚಲವಾದಿ, ಕೆ. ಜಯಣ್ಣ, ಆರ್‌ಎಫ್ಒ ಮಹೇಶ ಪಾಟೀಲ, ಎಸಿಎಫ್ ಎಸ್.ಆರ್. ಪಾತ್ರೋಟ, ರಮೇಶ ಚವ್ಹಾಣ, ವಿಠ್ಠಲ ಜಾಧವ ಇದ್ದರು.

ಕ್ರಿಕೆಟ್ ಪಂದ್ಯದಲ್ಲಿ ಆಲಮಟ್ಟಿ ಎಂಜಿನಿಯರ್ಸ್ ತಂಡ ಪ್ರಥಮ, ಅರಣ್ಯ ಇಲಾಖೆಯ ತಂಡ ದ್ವಿತೀಯ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಇಲಾಖೆಯ ತಂಡ ತೃತೀಯ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT