
ಇಬ್ರಾಹಿಂ ರೋಜಾದಲ್ಲಿರುವ ರಾಜಕಾಲುವೆಗಳನ್ನು ಬಂದ್ ಮಾಡಿರುವುದರಿಂದ ಇಬ್ರಾಹಿಂ ರೋಜಾ ಹಾಗೂ ಅಲಿರೋಜಾದಲ್ಲಿ ಮಳೆ ನೀರು ಹೊರಹೋಗಲು ದಾರಿಯೇ ಇಲ್ಲ. ಹೀಗಾಗಿ ಮಳೆ ನೀರು ಸ್ಮಾರಕದ ಒಳಗಡೆಯೇ ನಿಲ್ಲುತ್ತಿದ್ದು ಇದರಿಂದ ಸ್ಮಾರಕಕ್ಕೆ ಹಾನಿಯಾಗುತ್ತಿದೆ. ಪುರಾತತ್ವ ಇಲಾಖೆ ಹಾಗೂ ಪಾಲಿಕೆಯವರು ಜಂಟಿಯಾಗಿ ಕಾರ್ಯ ನಿರ್ವಹಿಸಿ ಸ್ಮಾರಕವನ್ನು ಉಳಿಸಬೇಕು.
-ಅಬ್ದುಲ್ ರಜಾಕ್ ಹೊರ್ತಿ, ಮಾಜಿ ಪಾಲಿಕೆ ಸದಸ್ಯ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲಿರೋಜಾದಂತಹ ಹಲವಾರು ಸ್ಮಾರಕಗಳು ಅವನತಿಯತ್ತ ಸಾಗುತ್ತಿವೆ. ಆದ್ದರಿಂದ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಇಂತಹ ಸ್ಮಾರಕ ಗುರುತಿಸಿ ಅವುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು.
-ಸಿದ್ದಲಿಂಗ್ ಬಾಗೇವಾಡಿ, ಎಐಡಿವೈಓ ರಾಜ್ಯ ಕಾರ್ಯದರ್ಶಿಇಟ್ಟಿಗೆಗಳಿಂದ ಮರು ಸ್ಪರ್ಶ ನೀಡಿದ್ದ ಸಮಾಧಿಗಳು ಕುಂದು ಹೋಗಿರುವುದು – ಪ್ರಜಾವಾಣಿ ಚಿತ್ರ
ಅನಾಥವಾಗಿ ಸ್ಮಾರಕದ ಒಳಗೆ ಬಿದ್ದರುವ ಬೋರ್ಡ್ – ಪ್ರಜಾವಾಣಿ ಚಿತ್ರ
ಅಲಿರೋಜಾ – ಪ್ರಜಾವಾಣಿ ಚಿತ್ರ
ಅಲಿರೋಜಾ ಆವರಣದಲ್ಲಿರುವ ಕಪ್ಪು ಶಿಲಾಮಂಟಪದ ಸಮಾಧಿ ಜಲಾವೃತವಾಗಿರುವುದು – ಪ್ರಜಾವಾಣಿ ಚಿತ್ರ