ತಿಕೋಟಾ: ಎಲ್ಲರೂ ರೈತರ ಹೆಸರಲ್ಲಿ ಅಧಿಕಾರ ಹಾಗೂ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ರೈತರು ಸರಿಯಾದ ಸೌಲಭ್ಯಗಳು ಸಿಗದೇ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲಾ ರೈತರು ಜಾತಿ, ಮತ, ಪಕ್ಷ ಅನ್ನದೆ ಒಗ್ಗಟಾಗಿ ಸಂಘಟಿತರಾಗಬೇಕು ಎಂದು ಕಕಮರಿಯ ಅಭಿನವ ಗುರುಲಿಂಗಜಂಗಮ ಮಹಾರಾಜರು ಮಾತನಾಡಿದರು.

ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವರ್ಷಪೂರ್ತಿ ಹಗಲಿರುಳು ದುಡಿದು ಕಳಪೆ ವಿದ್ಯುತ್, ಕಳಪೆ ಬೀಜ, ಔಷದಿ, ಕೀಟನಾಶಕ, ಸೇರಿದಂತೆ ಸಮಯಕ್ಕೆ ಮಳೆಯ ಕೊರತೆಯ ನಡುವೆಯೂ ಗಟ್ಟಿ ಧೈರ್ಯ ಮಾಡಿ ಬೆಳೆ ಬೆಳೆದ ರೈತರಿಗೆ ಬೆಲೆ ನಿಗದಿ ಮಾಡುಲು ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಬೆಂಕಿ ಪೊಟ್ಟಣಕ್ಕೆ ನಿರ್ದಿಷ್ಟ ಬೆಲೆ ಇದೆ ಆದರೆ ರೈತ ಬೆಳೆದ ಬೆಳೆಗೆ ದಲ್ಲಾಳ್ಳಿಗಳು ಬೆಲೆ ನಿಗದಿ ಮಾಡುವಂತಾಗಿದೆ. ಎಲ್ಲಿಯವರೆಗೆ ರೈತರೆಲ್ಲರೂ ಸಂಘಟಿತರಾಗುವುದಿಲ್ಲ ಅಲ್ಲಿಯವರೆಗೆ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದರು.

ಮಕಣಾಪುರದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ರೈತ ಸಂಘ ಆಗಬೇಕು. ಎಲ್ಲ ರೈತರು ಪ್ರಜ್ಞಾವಂತರಾಗಬೇಕು. ಕೃಷಿಯಲ್ಲಿ ಆಧುನಿಕರಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಬೇರೆ ಬೇರೆ ಕಾರ್ಯಗಳಿಗೆ ಆಲಮಟ್ಟಿ ಜಲಾಶಯ, ಕೂಡಗಿ ಎನ್ಟಿಪಿಸಿ ಫುಡ್ ಪಾರ್ಕ್, ವೈನ್ ಪಾರ್ಕ್, ವಿದ್ಯುತ್ ಪ್ಯಾನ್, ಸೋಲಾರ್ ಶಕ್ತಿ, ತಿಡಗುಂದಿ ಕೈಗಾರಿಕೆ. ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಹೆಸರಲ್ಲಿ ಕಬಳಿಸುತ್ತಿದ್ದೂ ಇದರಿಂದ ಮುಂದಿನ ದಿನಗಳಲ್ಲಿ ಒಂದು ಎಕರೆ ಭೂಮಿ ಇದ್ದವರು ಕೋಟ್ಯಧಿಪತಿ ಇದ್ದ ಹಾಗೆ. ಯಾರು ಭೂಮಿಯನ್ನ ಮಾರಿಕೊಳ್ಳಬೇಡಿ. ಸಮಗ್ರ ಕೃಷಿಯೊಂದಿಗೆ ಸಾವಯವ ಕೃಷಿ ಮಾಡಿದರೆ ಅರೋಗ್ಯದ ಜೊತೆ ಒಳ್ಳೆಯ ಆದಾಯ ಕೂಡ ಬರುವುದು, ಆದ್ದರಿಂದ ಎಲ್ಲಾ ರೈತರು ರೈತ ಸಂಘಕ್ಕೆ ಬನ್ನಿ ಎಂದರು.

ಜೋಡೆತ್ತಿನೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿರುವ ಹಾಗೂ ಕಾರ್ಯಕ್ರಮಕ್ಕೆ ಸಹಾಯ ಮಾಡಿರುವ ರೈತರಿಗೆ ಸನ್ಮಾನ ಮಾಡಲಾಯಿತು.

ತಿಕೋಟಾ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಮಲ್ಲಯ್ಯ ಹಿರೇಮಠ್, ರಾಚಯ್ಯ ಕೆಳಗಿನಮಠ, ಮುಖಂಡರಾದ ರಾಮನಗೌಡ ಪಾಟೀಲ, ಶಾನೂರ ನಂದರಗಿ ಸಂಗಪ್ಪ ಟಕ್ಕೆ,ನಜಿರ ನಂದರಗಿ, ಹನಮಂತ ಬ್ಯಾಡಗಿ,ಬಾಬು ಹೊನವಾಡ, ಸುಭಾಸ್ ಖೋಬ್ರೆ, ಸಂಗೀತಾ ರಾಠೋಡ,ಸುಜಾತ ಅವಟಿ, ರೇಷ್ಮಾ ಪವಾರ, ಸದಾಶಿವ ಘಡಾಲಟ್ಟಿ, ರಾಮಚಂದ್ರ ಅಗಸರ, ಈಶ್ವರ ಯಳಜೇರಿ, ಧರೆಪ್ಪ ಅನಂತಪುರ, ಶಿವು ಪಣಶೆಟ್ಟಿ, ಮಲ್ಲಪ್ಪ ಕೊಂಡಿ, ಶಿವಪ್ಪ ಘಡಾಲಟ್ಟಿ
ಕುಮಾರ ಚಡಚಣ, ಮಲ್ಲಪ್ಪ ಕೊಂಡಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಗ್ರಾಮದ ಪ್ರಮುಖ ಬಿದಿಗಳಲ್ಲಿ ಹತ್ತಾರು ಎತ್ತಿನ ಬಂಡಿ ಹಾಗೂ ಡೊಳ್ಳಿನ ಮೆರವಣಿಗೆ ಮಾಡುತ್ತಾ ಗ್ರಾಮ ಘಟಕದ ಬೋರ್ಡ್ ಉದ್ಘಾಟನೆ ಮಾಡಿ ವೇದಿಕೆಯಲ್ಲಿ ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಅಪ್ಪಾಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.