ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ಬಡ ಮಧ್ಯಮ ವರ್ಗದವರಿಗೆ ಕಾರ್ಯಕ್ರಮ ಮದುವೆ ಸಭೆ ಸಮಾರಂಭ ಮಾಡಲು ಅನುಕೂಲವಾಗಿದೆ. ಆದರೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಪುರಸಭೆಯವರು ಮಾಡಬೇಕು.
- ಲಕ್ಷ್ಮಣ ವಾಲಿಕಾರ, ವಾಲ್ಮೀಕಿ ಸಮಾಜದ ಮುಖಂಡ
ಅಂಬೇಡ್ಕರ್ ಸಭಾಭವನದಲ್ಲಿ ಪ್ರತಿಧ್ವನಿಸುವ ಸಮಸ್ಯೆಗೆ ತಜ್ಞರನ್ನು ಸಂಪರ್ಕಿಸಿದ್ದೇವೆ. ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು.
- ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ ಪುರಸಭೆ
ಅಂಬೇಡ್ಕರ್ ಸಭಾಭವನ ಸ್ವಚ್ಛತೆಯಿಂದ ಇಲ್ಲ ಎಂಬುದು ನನ್ನ ಗಮನಕ್ಕೂ ಬಂದಿದೆ. ಮೂಲಸೌಕರ್ಯ ಕಲ್ಪಿಸಲಾಗುವುದು. ಖಾಸಗಿಯವರಿಗೆ ನಿರ್ವಹಣೆಯ ಜವಾಬ್ದಾರಿ ನೀಡಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು.
- ಮಹೆಬೂಬ ಗೊಳಸಂಗಿ ಪುರಸಭೆ ಅಧ್ಯಕ್ಷ
ಮುದ್ದೇಬಿಹಾಳದ ಅಂಬೇಡ್ಕರ್ ಭವನದಲ್ಲಿ ಶೌಚಗೃಹದ ಅವ್ಯವಸ್ಥೆ
ಮುದ್ದೇಬಿಹಾಳ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೆಟ್ಟು ಒಡೆದಿರುವ ಅಲಂಕಾರಿಕ ಬಲ್ಬಗಳು.