ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರ ಮಾಡದಿರುವ ಅಫಿಡವಿಟ್‌ ಅಗತ್ಯ

ನ್ಯಾಯಮೂರ್ತಿ ಅರಳಿ ನಾಗರಾಜ್ ಸಲಹೆ
Last Updated 1 ಡಿಸೆಂಬರ್ 2022, 16:20 IST
ಅಕ್ಷರ ಗಾತ್ರ

ವಿಜಯಪುರ: ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯಿಂದ 'ತಾನು ಗೆದ್ದು ಬಂದ ಮೇಲೆ ಯಾವುದೇ ಪಕ್ಷ ಬದಲಾಯಿಸುವುದಿಲ್ಲ’ ಎಂಬ ಅಫಿಡವಿಟ್ ಪಡೆದುಕೊಳ್ಳುವ ಕಾನೂನು ರೂಪಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ಮಂಗಳೂರಿನ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ವಿಜಯಪುರದ ರಾಷ್ಟ್ರೀಯ ಸೌಹಾರ್ದ ವೇದಿಕೆ ಜಂಟಿ ಆಶ್ರಯದಲ್ಲಿ ಗುರುವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಆಶಯ ಈಡೇರಿದೆಯೇ?’ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಲ್ಲೂ ದೇಶ ಪ್ರೇಮ ಇತ್ತು. ಇತ್ತೀಚೆಗೆ ಸ್ವಾರ್ಥ ಪ್ರೇಮ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಇಂದು ಒಂದು ಪಕ್ಷ ಸೇರಿ ಗೆದ್ದು ಬಂದವರು ಅವರಿಗೆ ಬೇಕಾದಂತೆ ಪಕ್ಷ ಬದಲಿಸಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಮಾತನಾಡಿ, ಸಂವಿಧಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿಧಾನದ ಆಶಯ ಈಡೇರಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಯುವಜನತೆ ಜಾಗೃತರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.

ಸಾಹಿತಿ ವಿದ್ಯಾವತಿ ಅಂಕಲಗಿ, ರಾಜೇಶ್ವರಿ ಹಿಪ್ಪರಗಿ, ಜೆ.ಎಸ್. ಪಾಟೀಲ್, ಚಂದ್ರಶೇಖರ ಘಂಟಪ್ಪಗೋಳ, ಫಯಾಜ್ ಕಲಾದಗಿ, ರಿಯಾಜ್ ಫಾರುಕಿ, ಮೋಹನ್ ಹಿಪ್ಪರಗಿ,ಗಂಗಾಧರ್ ಗಾಂಧಿ,ಬಾಳು ಜೇವೂರ, ವಿ.ಎ. ಪಾಟೀಲ್, ಎಸ್. ಕೆ. ಗೊಂಗಡಿ,ಸುಜಾತ ಕಳ್ಳಿಮನಿ, ವಿದ್ಯಾರಾಣಿ ತುಂಗಳ, ಪ್ರಭಾವತಿ ನಾಟಿಕರ್, ರೇಣುಕಾ ಮುಳಸಾವಳಗಿ, ರಾಜೇಶ್ವರಿ ಮಠಪತಿ, ಅಕ್ರಮ ಮಾಶ್ಯಾಳಕರ, ಆರತಿ ಶಹಾಪುರ, ಮಹದೇವ ರಾವಜಿ, ಐ.ಸಿ. ಪಠಾಣ ಇದ್ದರು. ಉಪಸ್ಥಿತರಿದ್ದರು.

ಮಣಿಕಂಠ ಮಠಪತಿಯವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT