ನಾಲತವಾಡ: ಬೇರೆಡೆ ಸ್ಥಳಾಂತರಗೊಂಡಿದ್ದ ಪಟ್ಟಣದ 11ನೇ ವಾರ್ಡಿನ 15ನೇ ಅಂಗನವಾಡಿ ಕೇಂದ್ರವನ್ನು ಮೊದಲಿನ ಸ್ಥಳದಲ್ಲೇ ಆರಂಭಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಜಡಿದಿದ್ದ ಬೀಗವನ್ನು ಸಿಡಿಪಿಒ ಅವರೇ ತೆರೆದು ಸಮಸ್ಯೆ ತಿಳಿಗೊಳಿಸಿದ್ದಾರೆ. ಮೊದಲಿನ ಸ್ಥಳದಲ್ಲೇ ಅಂಗನವಾಡಿ ಆರಂಭಿಸಲು ಕಾರ್ಯಕರ್ತೆಗೆ ಸೂಚಿಸಿದ್ದಾರೆ.

ಏನಿದು ಜಟಾಪಟಿ?: ಸರ್ಕಾರಿ ಆದೇಶದಂತೆ ಸಮೀಪದ ಪ್ರಾಥಮಿಕ ಶಾಲೆಗಳ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರ ಆರಂಭಿಸುವ ಆದೇಶವಿತ್ತು. ಆದರೆ ಕಾರ್ಯಕರ್ತೆಯು ಸಲಹಾ ಸಮಿತಿಗೆ ಹೇಳದೇ ಕೇಳದೇ ಪಕ್ಕದ ಶಾಲೆಗೆ ಸ್ಥಳಾಂತರಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ.ಪಂ ಸದಸ್ಯರು ಹಾಗೂ ಸ್ಥಳೀಯರು ಪ್ರತಿಭಟಿಸಿ ಸ್ಥಳಾಂತರಗೊಂಡಿದ್ದ ಎಲ್ಲಾ ಸಾಮಾನುಗಳನ್ನು ಮೊದಲಿನ ಕೇಂದ್ರಕ್ಕೆ ತಂದು ಇರಿಸಿ ಬೀಗ ಜಡಿದಿದ್ದರು.

ಈ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಭಾನುವಾರ ಸುದ್ದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಸಿಡಿಪಿಒ ಮತ್ತು ಮೇಲ್ವಿಚಾರಕಿಯರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ದೂರುದಾರರೊಂದಿಗೆ ಚರ್ಚಿಸಿ ಬೇಡಿಕೆಗೆ ಸ್ಪಂದಿಸಿ ಬೀಗ ತೆರವುಗೊಳಿಸಿ ಮೊದಲಿನ ಸ್ಥಳದಲ್ಲೇ ಕೇಂದ್ರವನ್ನು ಆರಂಭಿಸಿ ಎಂದು ಕಾರ್ಯಕರ್ತೆಗೆ ಸೂಚಿಸಿದರು.

ಎತ್ತಂಗಡಿಗೆ ಒತ್ತಾಯ: ‘ಕಳೆದ ಹಲವು ವರ್ಷಗಳಿಂದಲೂ ಈಗಿರುವ ಕಾರ್ಯಕರ್ತೆ ಸಾರ್ವಜನಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ, ಮಕ್ಕಳ ಆಹಾರವನ್ನೂ ಸಮರ್ಪಕ ವಿತರಣೆ ಮಾಡುತ್ತಿಲ್ಲ, ಆಹಾರ ಖಾಸಗಿಯವರ ಮನೆಯಲ್ಲಿ ಸಂಗ್ರಹಿಸುತ್ತಾರೆ, ಇಂತಹ ಕಾರ್ಯಕರ್ತೆ ನಮ್ಮ ಕೇಂದ್ರಕ್ಕೆ ಬೇಡ’ ಎಂದು ಪಟ್ಟು ಹಿಡಿದರು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕೇಂದ್ರಕ್ಕೆ ನಾಳೆಯಿಂದ ಬೇರೆ ಕಾರ್ಯಕರ್ತೆಯನ್ನು ನೇಮಕ ಮಾಡಲಾಗುವುದು ಎಂದು ಭರವದೆ ನೀಡಿದರು.

ಈ ವೇಳೆ ಪ.ಪಂ ಸದಸ್ಯರಾದ ಅಮರಪ್ಪ ಸೀರಿ, ಉಮರಫಾರೂಕ್ ಮೂಲಿಮನಿ, ಮುದ್ದಪ್ಪ ಮಸ್ಕಿ, ಗಂಗಾಧರ ಗಂಗನಗೌಡ್ರ, ಮಲ್ಲು ಸಜ್ಜನ, ರವಿ ಸೀರಿ, ಜಗದೀಶ ಇಲಕಲ್, ಇಲಾಖೆಯ ಮೇಲ್ವಿಚಾರಕಿ ಪುಷ್ಪಾ ಕೋಲಾರ, ಹಿರಿಯ ಮೇಲ್ವಿಚಾರಕಿ ರಾಜೇಶ್ವರಿ, ಮಲ್ಲಿಕಾರ್ಜುನ ತಾಳಿಕೋಟಿಮಠ, ಪರಸಪ್ಪ ತರಬೀರಿ, ಗುಂಡಪ್ಪ ಮಾವಿನತೋಟ, ಶಿವರುದ್ರಪ್ಪ ಅಂಗಡಿ, ಗುರುಸಿದ್ದಯ್ಯ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.