ನಾಲತವಾಡ: ಬಸವ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಭಾನುವಾರ ಸ್ಥಳೀಯ ವಿನಾಯಕ ನಗರದಲ್ಲಿ ಬಸವ ಕೇಂದ್ರದ ಹಾಗೂ ಬಸವ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ನಿರ್ಧರಿಸಲಾಯಿತು.

‘ಏ. 30ರಂದು ಬೆಳಿಗ್ಗೆ 8.30 ಕ್ಕೆ ನಾಲತವಾಡದ ಬಜಾರದ ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚನೆ, ವಚನ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ವಿನಾಯಕ ನಗರದ ಗಣಪತಿ ಗುಡಿಯ ಸಮೀಪದ ಬಯಲಿನಲ್ಲಿ ಸಂಜೆ 5.30ರಿಂದ ಬಸವ ಕೇಂದ್ರದ ಸಹಯೋಗದೊಂದಿಗೆ ಷಟಸ್ಥಲ ದ್ವಜಾರೋಹಣ, ಸಂವಿಧಾನ ಪೀಠಿಕೆ ಬೋಧನೆ, ವಚನ ನೃತ್ಯ, ಆಲಮೇಲ ಪಟ್ಟಣದ ಪೂಜ್ಯ ಶ್ರೀ ಜಗದೇವ ಮಲ್ಲಿ ಬೊಮ್ಮ ಸ್ವಾಮೀಜಿಯವರಿಂದ ಅನುಭಾವ, ಬಸವ ಸ್ಮರಣೆ ಜರುಗುವುದು’ ಎಂದು ಮುಖಂಡರು ತಿಳಿಸಿದರು.

ಬಸವ ಸಮಿತಿಯ ಪಿ.ಜಿ.ಬಿರಾದಾರ, ನಿಂಗಣ್ಣ ಅಗ್ನಿ, ಹಿರಿಯರಾದ ಬಸನಗೌಡ ಪಾಟೀಲ, ಸಂಗಣ್ಣ ಹಡಲಗೇರಿ, ಶಂಕ್ರಣ್ಣ ನಾಗರದಿನ್ನಿ, ಚಂದ್ರು ಗಂಗನಗೌಡ್ರ, ಸಿದ್ರಾಮಪ್ಪ ಹಂಪನಗೌಡ, ಕೆ.ಆರ್.ಬಿರಾದಾರ, ಸಂಗಣ್ಣ ಬಿರಾದಾರ, ಸಂಗಣ್ಣ ಗಡೇದ, ಹಣಮಂತ ತೊಗರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.