ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ಚರ ಜಾತ್ರೋತ್ಸವ ಆ.11 ರಿಂದ ಐದು ದಿನ ವೈಭವದಿಂದ ಜರುಗಲಿದೆ. ಜಾತ್ರೆ ಅಂಗವಾಗಿ ನಡೆಯುವ ಕಾರ್ಯಕ್ರಮಗಳು, ಉತ್ಸವಗಳನ್ನು ಶಾಂತಿ, ಸುವ್ಯವಸ್ಥಿತವಾಗಿ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆಯಿಂದ ಜಾತ್ರಾ ಸಮಿತಿ ಹಾಗೂ ಸೇವಾ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಅವಶ್ಯಕ ಭದ್ರತೆ, ಸಹಕಾರ ಒದಗಿಸಲಾಗುವುದು ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹೇಳಿದರು.

ಪಟ್ಟಣದ ಐತಿಹಾಸಿಕ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಸೇವಾ ಸಮಿತಿ ಹಾಗೂ ಜಾತ್ರಾ ಉತ್ಸವ ಸಮಿತಿಗಳ ಸಹಯೋಗದಲ್ಲಿ ತಾಲ್ಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನ ಮುಂಭಾಗ ಮುದ್ದೇಬಿಹಾಳ ಸಂಪರ್ಕಿಸುವ ಮುಖ್ಯರಸ್ತೆ ಹಾದು ಹೋಗುವುದರಿಂದ ಎಸ್.ಬಿ.ಐ ಬ್ಯಾಂಕಿನಿಂದ ಬಸ್ ನಿಲ್ದಾಣದ ವರೆಗಿನ ಮುಖ್ಯರಸ್ತೆಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು. ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು. ಪಟ್ಟಣದ ಎಲ್ಲಾ ಗುರುಹಿರಿಯರು, ಪ್ರಮುಖರು ನೀಡುವ ಸಲಹೆ, ಸೂಚನೆಗಳನ್ನು ಗೌರವಿಸಿ ನಮ್ಮೂರಿನ ಹಬ್ಬ, ಅಪ್ಪ ಬಸವಣ್ಣನವರ ಜಾತ್ರೋತ್ಸವನ್ನು ಶಾಂತಿ, ಸುವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ನೆರವೇರಿಸಲು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ವ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದರು.

ತಹಶೀಲ್ದಾರ್ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಬಸವೇಶ್ವರ ಜಾತ್ರೋತ್ಸವದ ಪಲ್ಲಕ್ಕಿ ಉತ್ಸವ, ಮದ್ದು ಸುಡುವ ಹಾಗೂ ಸಾಂಸ್ಕೃತಿ ಮತ್ತು ಮನರಂಜನೆ ಕಾರ್ಯಕ್ರಮಗಳ ಸಂದರ್ಭ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಅಹಿತಕರ ಘಟನೆ ಸೃಷಿಸುವ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸ್ ಇಲಾಖೆಯವರು ಗುರುತಿಸಿ ಹಾಜರುಪಡಿಸಿದರೆ ಅಂತವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುವುದು. ಅಹಿತಕರ ಕೃತ್ಯಗಳನ್ನು ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಜಾತ್ರೆಯಲ್ಲಿ ಸೂಕ್ತ ವಿದ್ಯುತ್ ಸಂಪರ್ಕ, ವಿದ್ಯುತ್ ಅವಘಡ ಸಂಭವಿಸದಂತೆ ಹೆಸ್ಕಾಂ ನವರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಪುರಸಭೆಯವರು ಅವಶ್ಯವಿದ್ದಲ್ಲಿ ಸ್ವಚ್ಛತೆ ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹೀಗೆ ಎಲ್ಲಾ ಇಲಾಖೆಯವರು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಮ್ಮೂರ ಜಾತ್ರೆ ಅತ್ಯಂತ ಯಶಸ್ವಿಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರು, ಹಿರಿಯರಾದ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಅಪ್ಪ ಬಸವಣ್ಣನವರ ಕೃಪಾಶಿರ್ವಾದದಿಂದ ಬಸವನಬಾಗೇವಾಡಿಯ ಎಲ್ಲಾ ಗುರುಹಿರಿಯರು ಒಗ್ಗಟ್ಟು, ಜನರ ಸಹಕಾರದೊಂದಿಗೆ ಕಳೆದ 25-30 ವರ್ಷಗಳಿಂದ ಜಾತ್ಯತೀತವಾಗಿ ಅತ್ಯಂತ ವೈಭವದಿಂದ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಮ್ಮೂರ ಜಾತ್ರೆ ಆಚರಿಸಿಕೊಂಡು ಬಂದಿದ್ದೇವೆ. ಜಾತ್ರೆ ಆವರಣ ವಿಸ್ತರಣೆಯಾಗಿದ್ದು ಕೆಇಬಿ ಅವರು ನಾಲ್ಕು ಹೆಚ್ಚುವರಿ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದರೆ ಅನುಕೂಲವಾಗುತ್ತದೆ. ಜಾತ್ರೆ ಸುವ್ಯವಸ್ಥಿತವಾಗಿ ನಡೆಸಲು ಸಮಿತಿಯಿಂದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲಾ ಇಲಾಖೆಗಳ ಜಾತ್ರಾ ಕರ್ತವ್ಯಕ್ಕೆ ಗುರುಹಿರಿಯರು, ಸಮಿತಿಯವರು ಪೂರ್ಷ ಸಹಕಾರ ನೀಡುತ್ತೇವೆ ಎಂದರು.

ಮುಖಂಡ ಶಂಕರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಪೊಲೀಸ್ ಇನ್ಸ್ಪೆಕ್ಟರ್ ಗುರುಶಾಂತ ದಾಶ್ಯಾಳ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಜಾತ್ರಾ ಸಮಿತಿ ಅಧ್ಯಕ್ಷ ರವಿ ರಾಠೋಡ, ಹಿರಿಯರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೆಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.