ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರಿಗೆ ಬಸವೇಶ್ವರ ಜೀವಮಾನ ಗೌರವ ಪ್ರಶಸ್ತಿ ಪ್ರದಾನ

Last Updated 8 ಸೆಪ್ಟೆಂಬರ್ 2021, 13:35 IST
ಅಕ್ಷರ ಗಾತ್ರ

ಸೋಲಾಪುರ(ವಿಜಯಪುರ): ನಿಸ್ವಾರ್ಥದಿಂದ ಮಾಡಿದ ಕಾರ್ಯ ಸಮಾಜ ಹಿತಕ್ಕೆ ಸಲ್ಲುತ್ತದೆ. ಸಮತೆ, ಬಂಧುತ್ವ, ಸಮಾಜಕಲ್ಯಾಣವೇ ಬಸವಣ್ಣನವರ ತತ್ವ ಸಿದ್ಧಾಂತ ಎಂದು ಸೋಲಾಪುರದ ಸಂಸದ ಡಾ.ಜಯಸಿದ್ದೇಶ್ವರ ಶ್ರೀಗಳು ಹೇಳಿದರು.

ಇಲ್ಲಿಯ ಫಡಕುಲೆ ಸಭಾಭವನದಲ್ಲಿ ಮಹಾರಾಷ್ಟ್ರ ರಾಜ್ಯ ವೀರಶೈವ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿ, ನೌಕರರ ಕಲ್ಯಾಣಕಾರಿ ಮಂಡಳಿ ವತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜೀವಮಾನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರುಮಾತನಾಡಿದರು.

ಬಸವಣ್ಣನವರೇ ಮೊದಲ ಸಂಸತ್ತಿನ ನಿರ್ಮಾಪಕರು. ಹೊಸ ಸಂಸತ್‌ ಭವನದ ಅಡಿಗಲ್ಲು ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಈ ಮಾತನ್ನು ಅತ್ಯಂತ ಗೌರವದಿಂದ ಹೇಳಿದ್ದಾರೆ ಎಂದು ನೆನಪಿಸಿಕೊಂಡರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ.ಪಂ.ಸಿಇಓ ದಿಲೀಪ ಸ್ವಾಮಿ, ನಾನು ಯಾವುದೇ ವಿಶೇಷ ಕಾರ್ಯ ಮಾಡದೇ ನನ್ನ ಕರ್ತವ್ಯ ಮಾಡಿದ್ದೇನೆ. ಪ್ರತಿಯೊಬ್ಬರು ತಮಗೆ ವಹಿಸಿ ಕೊಟ್ಟ ಕಾರ್ಯವನ್ನು ಉತ್ತಮವಾಗಿ ಮಾಡಿದರೇ ಮಾತ್ರ ಬದಲಾವಣೆಯಾಗಲು ಸಾಧ್ಯ ಎಂದರು.

ಜಿ.ಪಂ.ಸದಸ್ಯ ಉಮೇಶ ಪಾಟೀಲ, ನಗರ ಸೇವಕ ಗುರುಶಾಂತ ಧುತ್ತರಗಾವಕರ, ಸಾಮಾಜಿಕ ಕಾರ್ಯಕರ್ತ ಸುದೀಪ ಚಾಕೋತೆ ಮಾತನಾಡಿದರು.

ಬಸವೇಶ್ವರ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶೈಲ ಹತ್ತುರೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಧನರಾಜ ಪಾಂಡೆ, ವಿಸ್ತೀರ್ಣಾಧಿಕಾರಿ ಸ್ವಾತಿ ಸ್ವಾಮಿ, ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ ವೀರಭದ್ರ ಯಾದವಾಡ, ಮಂಡಳಿಯ ಕಾರ್ಯದರ್ಶಿ ಬಸವರಾಜ ದಿಂಡೋರೆ, ಉಪಾಧ್ಯಕ್ಷ ಕಾಶೀನಾಥ ಧೋಂಗಡೆ, ಕೋಶಾಧ್ಯಕ್ಷ ಅನಿಲ ಬಿರಾದಾರ, ಸಂಚಾಲಕರಾದ ಅಶೋಕ ಪೋಮಾಜಿ, ಶಿವಾನಂದ ಗೋಗಾವ, ರೇವಣಸಿದ್ದ ಹತ್ತುರೆ,ಮಂಡಳಿಯ ರಾಜ್ಯಾಧ್ಯಕ್ಷ ಶಿವಾನಂದ ಭರಲೆ, ಸಿದ್ದೇಶ್ವರ ಧಸಾಡೆ, ನಾಗೇಶ ಸಾಳುಂಖೆ ಇದ್ದರು.

ಪ್ರಶಸ್ತಿ ಪುರಸ್ಕೃತರು:ಮುಖ್ಯ ಕಾರ್ಯಕಾರಿ ಅಧಿಕಾರಿ ದಿಲೀಪ ಸ್ವಾಮಿ, ಕಾಂಚನ ಫೌಂಡೇಶನ್ ಅಧ್ಯಕ್ಷ ಸುದೀಪ ಚಾಕೋತೆ, ಸಿದ್ದೇಶ್ವರ ನಿಂಬರ್ಗಿ, ಶರಣಪ್ಪ ಮಂಗಣೆ, ಸುನೀಲ ಮುನಾಳೆ, ಸಮೀರ ಕುಂಬಾರ, ಗುರುಸಿದ್ಧಯ್ಯ ಹಿರೇಮಠ, ಅಂಜಲಿ ಸಿರಸಿ, ಸುಹಾಸ ಉರವಣೆ, ಸುನೀಲ ಢಿಗೋಳೆ, ಕಲ್ಲಪ್ಪ ಬಿರಾಜದಾರ, ಗೌರಿಶಂಕರ ಸ್ವಾಮಿ, ಅಶೋಕ ಬಿರಾದಾರ, ಮಿಲಿಂದ ಸ್ವಾಮಿ, ಅಪ್ಪಾಸಾಹೇಬ ಗಂಜಿನಗೋಟೆ, ಮೇಘಾ ಧಾರಪಳೆ ಅವರಿಗೆಬಸವೇಶ್ವರ ಜೀವಮಾನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT