ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾತೀರದ ಭೈರಗೊಂಡ ಶೂಟೌಟ್ ಪ್ರಕರಣ: ಮತ್ತೆ ಐವರ ಬಂಧನ

Last Updated 7 ನವೆಂಬರ್ 2020, 7:26 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್ ಮುಖಂಡ, ಭೀಮಾ ತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ್ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅತಾಲಟ್ಟಿ ಗ್ರಾಮದ ಯಾಶೀನ್ ರಂಜಾನ್ ಸಾಬ್ ದಂದರಗಿ (25), ಕರೆಪ್ಪ ಊರ್ಫ್ ಗೂಳಿ ಮಹಾದೇವ ಸೊನ್ನದ (25), ಸಿದ್ದು ಊರ್ಫ್ ಸಿದ್ದರಾಯ ಬಸಪ್ಪ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಂಜು ಊರ್ಫ್ ಸಚಿನ್ ತುಕಾರಾಮ ಮಾನವರ (28) ಹಾಗೂ ಚಡಚಣದ ರವಿ ಧರೆಪ್ಪ ಬಂಡಿ (20) ಬಂಧಿತ ಆರೋಪಿಗಳು.

ಇವರಿಂದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಅನುಪಮ್ ಅಗರವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಎಎಸ್ ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿನಾರಾಯಣ, ಸಿಪಿಐಗಳಾದ ಎಂ.ಕೆ. ದ್ಯಾಮಣ್ಣವರ, ರವೀಂದ್ರ‌ ನಾಯ್ಕೋಡಿ, ಸುನೀಲ‌ ಕಾಂಬಳೆ, ಸುರೇಶ ಬಂಡೆಗುಂಬಳ, ಬಸವರಾಜ ಮೂಕರ್ತಿಹಾಳ ಹಾಗೂ ಪಿಎಸ್‌ಐ ತಂಡ ಯಶಸ್ವಿಯಾಗಿದ್ದಕ್ಕೆ ಎಸ್‌ಪಿ ಶ್ಲಾಘಿಸಿದರು.
ಬೈರಗೊಂಡ ಸ್ಥಳಾಂತರ: ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾದೇವ ಭೈರಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT