ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬೈಕ್, ಮೊಬೈಲ್ ಕಳ್ಳರ ಬಂಧನ

Published 26 ಮಾರ್ಚ್ 2024, 15:26 IST
Last Updated 26 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ, ಮುಧೋಳ ಮತ್ತು ಜಮಖಂಡಿ ನಗರದಲ್ಲಿ ಬಹಳ ದಿನಗಳಿಂದ ಬೈಕ್‌, ಮೊಬೈಲ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿಜಯಪುರ ನಗರ ಪೊಲೀಸರು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಧೋಳ ತಾಲ್ಲೂಕಿನ ಚಿಂಚಗಂಡಿಯ ಸುನೀಲ ಗಡ್ಡಿ(31), ವಿಜಯಪುರ ನಗರದ ಜೆ.ಎಂ.ರಸ್ತೆಯ ಕೆ.ಎಚ್‌.ಬಿ ಕಾಲೊನಿಯ ಮೊಶಿನ್‌ ಕಲಾದಗಿ(24)ಮತ್ತು ಸದ್ಧಾಂ ಮುತವಲ್ಲಿ(20) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಆರೋಪಿಗಳ ಬಳಿಯಿಂದ ಅಂದಾಜು ₹15.60 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ಹಾಗೂ ಅಂದಾಜು ₹2.90 ಲಕ್ಷ ಮೌಲ್ಯದ 29 ಮೊಬೈಲ್‌ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT