ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಗಲಗಲಿ ಬ್ಯಾರೇಜ್‌ಗೆ ಗಂಗಾಪೂಜೆ ಇಂದು

Last Updated 22 ಜೂನ್ 2021, 12:20 IST
ಅಕ್ಷರ ಗಾತ್ರ

ವಿಜಯಪುರ: ಚಿಕ್ಕಗಲಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಜಾಕೆಟಿಂಗ್ ತಂತ್ರಜ್ಞಾನದ ಬ್ಯಾರೇಜ್ ತುಂಬಿ ಹರಿಯತೊಡಗಿದೆ.

ಶಾಸಕ ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ರೈತರಿಗೆ ಅನುಕೂಲವಾಗಲು ನೂತನ ತಂತ್ರಜ್ಞಾನ ಬಳಸಿ, ಹಾಲಿ ಇದ್ದ ಬ್ಯಾರೇಜ್‍ನ್ನು ಬಲಪಡಿಸಿ, ಎತ್ತರಿಸುವ ಕಾಮಗಾರಿಗೆ ಹೆಚ್ಚಿನ ಮುತುವರ್ಜಿ ವಹಿಸಿ, ಚಾಲನೆ ನೀಡಿದ್ದರು.

ಈ ಕಾಮಗಾರಿಗೆ ₹ 54 ಕೋಟಿ ವೆಚ್ಚವಾಗಿದ್ದು, ಇದೀಗ ಮಳೆ ಹಾಗೂ ಮೇಲ್ಭಾಗದ ಹಿಪ್ಪರಗಿ ಆಣೆಕಟ್ಟಿನಿಂದ ನೀರು ಬಿಟ್ಟಿದ್ದರಿಂದ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿದೆ.

ಕಾಮಗಾರಿ ಪೂರ್ಣಗೊಂಡ ನಂತರ ಪ್ರಥಮ ಬಾರಿಗೆ ನೀರು ತುಂಬಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಗಂಗಾಪೂಜೆಯನ್ನು ಜೂನ್‌ 23 ಬೆಳಿಗ್ಗೆ 10ಕ್ಕೆ ಏರ್ಪಡಿಸಿದ್ದು, ಬ್ಯಾರೇಜ್ ರೂವಾರಿ ಎಂ.ಬಿ.ಪಾಟೀಲ ಅವರು ಗಂಗಾಪೂಜೆ ನೆರವೇರಿಸಲಿದ್ದಾರೆ ಎಂದು ಎಚ್.ಎಸ್.ಕೋರಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT