ಕಾಂಗ್ರೆಸ್, ಬಿಜೆಪಿ ವಿಜಯೋತ್ಸವ

ವಿಜಯಪುರ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು.
ಕಾಂಗ್ರೆಸ್ ಸಂಭ್ರಮ:
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಇರುವ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ನಮನ ಸಲ್ಲಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಶರಣಪ್ಪ ಯಕ್ಕುಂಡಿ, ಜಮೀರ ಬಾಂಗಿ, ಸಂತೋಷ ಪವಾರ, ವಸಂತ ಹೊನಮೋಡೆ, ಅಪ್ಪು ಪೂಜಾರಿ, ಮಹಾಂತೇಶ ಅವಟಿ, ಕಲ್ಲಪ್ಪ ರ‍್ಶೆಟ್ಟಿ, ರವೀಂದ್ರ ಜಾಧವ, ಅನ್ವರ ಅತ್ತಾರ ಇದ್ದರು.
ಬಿಜೆಪಿ ಸಂಭ್ರಮ:
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಗರ ಮಂಡಳ ಕಾರ್ಯಕರ್ತರು ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಒಲವು ಗುಜರಾತ್ ಗೆಲುವಿನ ಸಂಕೇತವಾಗಿದೆ. ಸಹಜವಾಗಿಯೇ ಗುಜರಾತ್‌ನಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದ ಪರಿಣಾಮ ಈ ಗೆಲುವು ದೊರಕಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯರ ರಾಜಶೇಖರ ಮಗಿಮಠ, ಯುವ ಮುಖಂಡರಾದ ರಾಮನಗೌಡ ಪಾಟೀಲ ಯತ್ನಾಳ, ನಗರ ಅಧ್ಯಕ್ಷ ಮಳನಗೌಡ ಪಾಟೀಲ್, ರಾಘವ ಅಣ್ಣಿಗೇರಿ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ,ಗೊಳಸಂಗಿ, ಉಮೇಶ ಕೋಳಕೂರ, ವಿಜಯ ಜೋಶಿ, ರಾಹುಲ್ ಜಾಧವ, ಎಂ.ಎಸ್.ಕರಡಿ ಇದ್ದರು.
ಮಹಾಮಂಡಳ ವಿಜಯೋತ್ಸವ:
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಗಜಾನನ ಉತ್ಸವ ಮಹಾಮಂಡಳಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಹಿಂದುತ್ವವಾದ, ರಾಷ್ಟ್ರೀಯ ಚಿಂತನೆಗಳು ಹಾಗೂ ಅಭಿವೃದ್ಧಿ ಮಂತ್ರಕ್ಕೆ ಮತದಾರರು ಮನಸೋತು ಸತತ ಏಳು ಬಾರಿ ಗುಜರಾತ್‌ನಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಮಹಾ ಮಂಡಳ ಅಧ್ಯಕ್ಷ ಕಾಂತು ಶಿಂಧೆ, ಈರಣ್ಣ ಪಟ್ಟಣಶೆಟ್ಟಿ, ಮಹೇಶ ಒಡೆಯರ, ಸನ್ನಿಗವಿಮಠ, ವಿಜು ಕೋಹಳ್ಳಿ, ಸಂತೋಷ ಜಾಧವ, ವಿನಾಯಕ ದಹಿಂಡೆ, ರಾಜೇಶ ತವಸೆ, ಗುರುರಾಜ ದೇಶಪಾಂಡೆ, ಸಚಿನ್ ಅಡಕಿ, ಸಚಿನ , ಸಂಗು ಉಕ್ಕಲಿ, ಸತೀಶ ಪೀರನಾಯಕ, ಅಖಿಲ ಶೀಲವಂತ, ಕಲ್ಯಾಣಿ ನಾಯಕ ಇದ್ದರು.
****
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಫಲಿತಾಂಶ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ
– ಉಮೇಶ ಕಾರಜೋಳ, ಜಿಲ್ಲಾ ಉಪಾಧ್ಯಕ್ಷ, ಬಿಜೆಪಿ
***
ಹಿಮಾಚಲ ಪ್ರದೇಶದ ಜನ ಬದಲಾವಣೆ ಬಯಸಿ ಕಾಂಗ್ರೆಸ್ ಮೇಲೆ ಭರವಸೆ ಇಟ್ಟಿದ್ದಾರೆ. ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ದುರಾಡಳಿತ ಅಂತ್ಯವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ
–ಅಬ್ದುಲ್ ಹಮೀದ್ ಮುಶ್ರೀಫ್, ಕಾಂಗ್ರೆಸ್ ಮುಖಂಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.