ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆಗೆ ಕಾಂಗ್ರೆಸ್ ಆಕ್ರೋಶ

ರೈತ ವಿರೋಧಿ ಕರಾಳ ಕೃಷಿ ಕಾನೂನು ಹಿಂಪಡೆಯಲು ಆಗ್ರಹ
Last Updated 9 ಫೆಬ್ರುವರಿ 2021, 16:54 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿ, ತೈಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ತಳ್ಳು ಗಾಡಿಯಲ್ಲಿ ಬೈಕ್ ಇಟ್ಟು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಂಗ್ರೆಸ್ ಮುಖಂಡ ಅಬ್ದುಲ್‍ ಹಮೀದ್ ಮುಶ್ರಿಫ್ ಮಾತನಾಡಿ, 'ಕೇಂದ್ರ ಬಿಜೆಪಿಸರ್ಕಾರ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಇಡೀ ದೇಶದ ರೈತರು 75 ದಿನಗಳಿಂದ ದೆಹಲಿಯಲ್ಲಿ ಹಾಗೂ ಇಡೀ ದೇಶದಲ್ಲಿ ಹೋರಾಟ ಮಾಡುತ್ತಿದ್ದಾರೆ. ದೆಹಲಿ ಹೋರಾಟದಲ್ಲಿ ನಿರತ 155ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೂ ಕೇಂದ್ರ ಸರ್ಕಾರ ಸ್ಪಂದಿಸದೆ, ರೈತರ ಜೀವನದ ಜೊತೆಗೆ ಚೆಲ್ಲಾಟಡುತ್ತಿರುವುದು ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಒಂದು ಕಡೆ ರೈತರು ಇಂತಹ ಕರಾಳ ಕಾನೂನುಗಳ ವಿರುದ್ಧಹೋರಾಟ ಮಾಡುತ್ತಿದ್ದರೆ,ಇನ್ನೊಂದೆಡೆ ಕೇಂದ್ರ ಸರ್ಕಾರಲಾಭಕೋರತನದಲ್ಲಿ ಮಗ್ನವಾಗಿ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಪದೇ ಪದೇ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನಕ್ಕೆ ಕುತ್ತು ತಂದಿದೆ' ಎಂದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಮಾತನಾಡಿ, 'ಕೇಂದ್ರಸರ್ಕಾರ ತಂದಿರುವ ಕರಾಳ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಈ ದೇಶದ ಜಿ.ಡಿ.ಪಿ ಬೆಳವಣಿಗೆ ಸಂಪೂರ್ಣ ರೈತರ ಮೇಲೆ ನಿಂತಿದ್ದು, ಸರ್ಕಾರ ಗಂಭೀರವಾಗಿಪರಿಗಣಿಸಬೇಕು. ಲೋಕಸಭೆ ಚುನಾವಣೆಯಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಸುಳ್ಳು ಆಶ್ವಾಸನೆಗಳನ್ನುನೀಡಿ, ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರುಇಂದು ದೇಶದಲ್ಲಿಸರ್ಕಾರಿ ಸಂಸ್ಥೆಗಳನ್ನು ಉದ್ಯಮಿಗಳಿಗೆ ಮಾರಾಟಕ್ಕೆ ಇಟ್ಟಿದ್ದಾರೆ' ಎಂದು ಕಿಡಿಕಾರಿದರು.

ಮುಖಂಡರಾದವೈಜನಾಥ ಕರ್ಪೂರಮಠ, ಸುನೀತಾ ಐಹೊಳ್ಳಿ, ಸುರೇಶ ಘೊಣಸಗಿ, ವಿದ್ಯಾರಾಣಿ ತುಂಗಳ, ಶ್ರೀಕಾಂತ ಛಾಯಾಗೋಳ, ವಿದ್ಯಾವತಿ ಅಂಕಲಗಿ, ಜಮೀರ್ ಅಹ್ಮದ್ ಬಕ್ಷಿ, ಆರತಿ ಶಹಾಪುರ, ಶಬ್ಬೀರ್ ಜಾಗೀರದಾರ, ರುಕ್ಮಿಣಿ ಲಮಾಣಿ ಮಾತನಾಡಿದರು.

ಮುಖಂಡರಾದಚಾಂದಸಾಬ್ ಗಡಗಲಾವ, ಮಲ್ಲನಗೌಡ ಬಿರಾದಾರ, ಶಹಜಾನ್ ದುಂಡಸಿ, ವಿನೋದ ವ್ಯಾಸ, ಮಹಮ್ಮದ್ ರಪೀಕ್ ಟಪಾಲ್, ಸಾಹೆಬಗೌಡ ಬಿರಾದಾರ, ಇಲಿಯಾಸ್ ಬಗಲಿ, ಪೀರಪ್ಪ ನಡುವಿನಮನಿ, ಡಿ.ಎಚ್.ಕಲಾಲ, ವಸಂತ ಹೊನಮೋಡೆ, ಮೈನುದ್ದೀನ್ ಬೀಳಗಿ, ಅಜೀಮ್ ಇನಾಮದಾರ, ರವುಫ್ ಶೇಖ್, ಅನ್ವರ್ ದ್ರಾಕ್ಷಿ, ಶರಣಪ್ಪ ಯಕ್ಕುಂಡಿ, ಜಾಕೀರ್ ಬಾಗವಾನ, ಹಾಜಿಲಾಲ್ ದಳವಾಯಿ, ಚನ್ನಬಸ್ಪಪ್ಪ ನಂದರಗಿ, ದಾವಲಸಾಬ್ ಬಾಗವಾನ, ಈರಪ್ಪ ಜಕ್ಕನವರ, ಬಿ.ಎಸ್.ಬ್ಯಾಳಿ, ಹೈದರ್ ನದಾಫ್, ಅಕ್ರಮ್ ಮಾಶ್ಯಾಳಕರ್, ಪಿರೋಜ್ ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT