ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಎರಡನೇ ಡೋಸ್‌ಗೆ ಆದ್ಯತೆ: ಯತ್ನಾಳ

Last Updated 14 ಮೇ 2021, 10:20 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಕೋವಿಡ್‌ ಎರಡನೇ ಡೋಸ್ ಲಸಿಕೆಯ ಗರಿಷ್ಠ ಮಿತಿಯನ್ನು ಮುಟ್ಟುವವರೆಗೂ ಹೆಚ್ಚಿನ ಆದ್ಯತೆ ನೀಡಿ ನಿರಂತರವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರೆಯುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಜೋರಾಪುರ ಪೇಠ ಶಂಕರಲಿಂಗ ದೇವಸ್ಥಾನದ ಆವರಣ, ಶಹಾಪೇಟಿ ಮಹಾದೇವಪ್ಪನ ಗುಡಿ ಆವರಣ ಹಾಗೂ ಕಮಾನ ಖಾನ ಬಜಾರ ಈಶ್ವರಲಿಂಗ ಗುಡಿ ಆವರಣದಲ್ಲಿ ಶುಕ್ರವಾರ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದಆರುಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧೀನದಲ್ಲಿ ಬರುವಂತಹಎಲ್ಲ ಬಡಾವಣೆ, ಕಾಲೊನಿಗಳಲ್ಲಿ, ಓಣಿಗಳಲ್ಲಿ ನಿರಂತರವಾಗಿ ಎರಡನೇ ಡೋಸ್ ಲಸಿಕೆ ಹಾಕುಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ್, ಆರೋಗ್ಯ ಅಧಿಕಾರಿ ಡಾ. ಬಾಲಕೃಷ್ಣ, ಡಾ.ಜನ್ನತ್, ಪಾಲಿಕೆ ಮಾಜಿ ಸದಸ್ಯರಾದ ರಾಜೇಶ ದೇವಗೇರಿ, ರಾಹುಲ್ ಜಾಧವ್, ಮುಖಂಡರಾದ ಚಂದ್ರು ಚೌಧರಿ,ಶಿವರುದ್ರ ಬಾಗಲಕೋಟ, ಸಿದ್ದು ಹಂಜಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT