ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಸಲಹೆ, ಸೂಚನೆ ಪಾಲಿಸಿ

Last Updated 31 ಜುಲೈ 2020, 14:05 IST
ಅಕ್ಷರ ಗಾತ್ರ

ಇಂಡಿ: ‘ನನಗೆ ಯಾವುದೇ ತರಹದ ರೋಗ ಲಕ್ಷಣ ಇರಲಿಲ್ಲ. ಆದರೂ ಜುಲೈ 8 ರಂದು ಕೋವಿಡ್‌ ಪರೀಕ್ಷೆಗೆ ಒಳಗಾದೆ ಪಾಸಿಟಿವ್‌ ದೃಢವಾಯಿತು. ಒಮ್ಮೆ ಭಯ, ಆತಂಕದ ಎದುರಾಯಿತು. ಮನೆಯವರು ಹಾಗೂ ಸಹೋದ್ಯೋಗಿಗಳು ಧೈರ್ಯ ತುಂಬಿದರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕ್ವಾರಂಟೈನ್ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಹಣ್ಣು, ಹಾಲು, ಕಷಾಯದೊಂದಿಗೆ ಅಗತ್ಯ ಔಷಧ ನೀಡಿ ಗುಣಮುಖ ಮಾಡಿ ಕಳಿಸಿದ್ದಾರೆ’ ಎಂದು ಕೋವಿಡ್‌ನಿಂದ ಗುಣಮುಖರಾಗಿರುವಇಂಡಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್‌ ಜೆ.ಎಸ್.ನಿಲೂರೆ ಹೇಳಿದರು.

‘ಮಳೆಗಾಲದಲ್ಲಿ ಕೆಲವರಿಗೆ ಕಫ ಆಗುತ್ತಿದೆ. ಕಫ ಇದ್ದಾಗ ಕೊರೊನಾ ಟೆಸ್ಟ್‌ ಮಾಡಿಸಿದರೆ, ಪಾಸಿಟಿವ್‌ ಬಂದೇ ಬರುತ್ತದೆ. ಅದಕ್ಕೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಯಾರೂ ಕೋವಿಡ್ ರೋಗವನ್ನು ಮಾರಕ ರೋಗವೆಂದು ಪರಿಗಣಿಸದೇ ಸಾಮಾನ್ಯ ರೋಗವೆಂದು ಪರಿಗಣಿಸಿ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸಿದರೆ ಸಾಕು, ರೋಗ ನಿವಾರಣೆಯಾಗುತ್ತದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ಇದೀಗ ಎಂದಿನಂತೆ ಕೆಲಸ ಮಾಡುತ್ತಿದ್ದೇನೆ. ಯಾವುದೇ ಆತಂಕವಿಲ್ಲ. ದೃಶ್ಯ ಮಾಧ್ಯಮದವರು ಹೇಳುವಷ್ಟು ಮಾರಕ ರೋಗ ಇದಲ್ಲ. ವೈರಸ್ ಅಂಟಿದರೆ ಕೆಮ್ಮು, ನೆಗಡಿ, ಜ್ವರಕ್ಕೆ ಎಷ್ಟು ಮಹತ್ವ ನೀಡುತ್ತೆವೆಯೋ ಅಷ್ಟೇ ಮಹತ್ವ ನೀಡಿದರೆ ಸಾಕು. ಆದಷ್ಟು ಅಂತರದಿಂದ ಇರುವ ಮೂಲಕ ಇನ್ನೊಬ್ಬರಿಗೆ ಹರಡದಂತೆ ತಡೆದರೆ ಸಾಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT