ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ: ನೂರು ಕೋಳಿ ಮರಿಗಳ ಸಾವು

Published 11 ಮೇ 2024, 15:27 IST
Last Updated 11 ಮೇ 2024, 15:27 IST
ಅಕ್ಷರ ಗಾತ್ರ

ನಿಡಗುಂದಿ: ತಾಲ್ಲೂಕಿನ ಬಳಬಟ್ಟಿಯಲ್ಲಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಗ್ರಾಮದ ಮಲ್ಲಪ್ಪ ಬಸಪ್ಪ ಕೊಪ್ಪ ಅವರ ಕೋಳಿ ಫಾರಂ ಶೆಡ್‌ ಹಾರಿದ್ದು, ಶೆಡ್‌ನಲ್ಲಿದ್ದ 100 ಕೋಳಿ ಮರಿಗಳು ಮೃತಪಟ್ಟಿವೆ.

ಕಳೆದ ಕೆಲ ದಿನಗಳ ಹಿಂದಷ್ಟೇ ತಂದಿದ್ದ 100 ಜವಾರಿ ಕೋಳಿ ಮರಿಗಳ ಮೇಲೆ ಶೆಡ್ ಬಿದ್ದು ಕೋಳಿ ಮರಿಗಳು ಸಾವನ್ನಪ್ಪಿವೆ. ಕೋಳಿ ಮರಿಗಳಿಗೆ ತರಿಸಿದ್ದ ಆಹಾರ ಕೂಡಾ ಹಾಳಾಗಿದ್ದು, ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ.

‘ಕೋಳಿ ಫಾರಂ ಶೆಡ್ ನಿರ್ಮಿಸಲು ನಾಲ್ಕೈದು ಲಕ್ಷ ಸಾಲ ಮಾಡಿದ್ದೆ. ಸರ್ಕಾರದ ಯೋಜನೆಯಡಿ ಶೆಡ್ ನಿರ್ಮಿಸಲು ಸಹಾಯಧನ ಬರುತ್ತದೆ ಎಂಬ ನಿರೀಕ್ಷೆಯಿತ್ತು. ಸರ್ಕಾರದ ಸಹಾಯಧನವೂ ಬರಲಿಲ್ಲ, ಈಗ ಕೋಳಿಗಳೂ ಉಳಿಯಲಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಮಲ್ಲಪ್ಪ ಕೊಪ್ಪ ತಮ್ಮ ಗೋಳು ತೋಡಿಕೊಂಡರು.

ಮೋಡ ಕವಿದ ವಾತಾವರಣ: ಶನಿವಾರ ಇಡೀ ದಿನ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಬಳಬಟ್ಟಿ ಸೇರಿದಂತೆ ಕೆಲ ಕಡೆ ಮಾತ್ರ ಕೆಲ ನಿಮಿಷಗಳ ಕಾಲ ಜಿಟಿಜಿಟಿ ಮಳೆಯಾಗಿದೆ. ಗಾಳಿಗೆ ಒಂದೆರೆಡು ಗಿಡಗಳು ಉರುಳಿವೆ.

ನಿಡಗುಂದಿ ತಾಲ್ಲೂಕಿನ ಬಳಬಟ್ಟಿ ಗ್ರಾಮದ ಬಸಪ್ಪ ಕೊಪ್ಪ ಅವರ ಹೊಲದಲ್ಲಿನ ಕೋಳಿ ತಗಡಿನ ಶೆಡ್ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಹಾರಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT