ವಿಜಯಪುರ: ಜಾತ್ಯತೀತ, ಅಂಬೇಡ್ಕರ್ವಾದಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರನ್ನು ಎತ್ತಿಕಟ್ಟುತ್ತಿರುರುವ ಆರ್ಎಸ್ಎಸ್, ಬಿಜೆಪಿ ಕುತಂತ್ರ ಖಂಡಿಸಿ ಜೂನ್ 10ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ ಛಲವಾದಿ ನಾರಾಯಣಸ್ವಾಮಿ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿಯವರನ್ನು ಪಾಕಿಸ್ತಾನದವರೇ ಎಂದು ಅವಹೇಳನ ಮಾಡಿರುವ ಎನ್.ರವಿಕುಮಾರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಅವರ ಸದಸ್ಯತ್ವ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್ ಆರ್. ಎಸ್. ಎಸ್ ಕೈಯಲ್ಲಿರುವ ಕೋಲಾಗಿದ್ದಾರೆ. ಬಿಜೆಪಿ ಹೇಳಿದಂತೆ ಆಡುವ ಗೊಂಬೆಗಳಾಗಿದ್ದಾರೆ’ ಎಂದು ಆರೋಪಿಸಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಚುಕ್ಕಾಣಿ ಹಿಡಿದಿರುವುದನ್ನು ಸಹಿಸಲಾಗದೇ ಬಿಜೆಪಿ ಕುತಂತ್ರ ನಡೆಸಿದೆ. ಪ್ರಿಯಾಂಕ್ ಖರ್ಗೆಯವರನ್ನು ಹತ್ತಿಕ್ಕಲು ಛಲವಾದಿ ನಾರಾಯಣ ಸ್ವಾಮಿ ಅವರನ್ನು ಎತ್ತಿಕಟ್ಟಲಾಗಿದೆ. ದಲಿತರ ಏಳಿಗೆ ಬಯಸದ ಬಿಜೆಪಿ, ಆರ್. ಎಸ್. ಎಸ್ ದಲಿತ ನಾಯಕನನ್ನು ಹತ್ತಿಕ್ಕುವ ಕೆಲಸವನ್ನು ದಲಿತರ ಮೂಲಕವೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಛಲುವಾದಿ ಅಲ್ಲ; ಅವರು ಮನುವಾದಿ ನಾರಾಯಣ ಸ್ವಾಮಿಯಾಗಿದ್ದಾರೆ. ಸಚಿವರ ವಿರುದ್ಧ ಕೀಳು ಭಾಷೆ ಪ್ರಯೋಗ ಮಾಡಿದ್ದಾರೆ. ನಾಯಿ ಎಂಬ ಪದ ಬಳಸಿರುವುದು ಖಂಡನೀಯ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಯಾದ ಬಳಿಕ ಸಮಾಜದಲ್ಲಿ ಎಲ್ಲರೂ ಸಮಾನರು. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರೂ ಸಮಾನರು. ಅಂಬೇಡ್ಕರ್ ಕನಸು ಅದೇ ಆಗಿತ್ತು. ಆದರೆ, ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ, ಜಗಳ ಹಚ್ಚುವ ಕೆಲಸ ಬಿಜೆಪಿ, ಆರ್ಎಸ್ಎಸ್ ಮಾಡುತ್ತಿದೆ’ ಎಂದರು.

₹50 ಲಕ್ಷ ಪರಿಹಾರ ನೀಡಿ:

ಬೆಂಗಳೂರು ಆರ್ ಸಿ ಬಿ ವಿಜಯೋತ್ಸವದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಸಾವನಪ್ಪಿರುವುದು ಬೇಸರದ ಸಂಗತಿ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು, ಸಾವಿಗೀಡಾದವರಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ಬಿ.ಸಿ.ವಾಲಿ, ಸಿದ್ದು ರಾಯಣ್ಣವರ, ವೈ.ಸಿ.ಮಯೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.