ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆ ಭೂಮಿಗೆ ಯೋಗ್ಯ ದರಕ್ಕೆ ಬೇಡಿಕೆ

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಸಭೆ ನಿರ್ಣಯ
Last Updated 12 ಆಗಸ್ಟ್ 2021, 12:39 IST
ಅಕ್ಷರ ಗಾತ್ರ

ಬಬಲೇಶ್ವರ: ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸಭೆ ನಡೆಯಿತು.

ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು ಈಗಿನ 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಿದಾಗ ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿಗೆ ಯೋಗ್ಯ ದರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೂತನ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.

ಸಂತ್ರಸ್ತರ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಎಚ್.ಜಿ. ಬಾಳಶೆಟ್ಟಿ, ಕುಮಾರ ನಿಡೋಣಿ, ಪ್ರಭುಸ್ವಾಮಿ ಹಿರೇಮಠ, ಮೋಹನ ಜಾಧವ, ದುಂಡಪ್ಪ ನಾಗನೂರ ಮತ್ತು ಹೈಕೋರ್ಟ್‌ ವಕೀಲ ರಾಜೇಂದ್ರ ದೇಸಾಯಿ ಮಾತನಾಡಿದರು.

ಹೋರಾಟ ಸಮಿತಿ ಅಧ್ಯಕ್ಷ ಮುತ್ತು ವಾಸಣ್ಣ ದೇಸಾಯಿ ಅವರು ಮುಂದಿನ ರೂಪುರೇಷೆಗಳ ಕುರಿತು ವಿವರಿಸಿದರು.

ಹಿರಿಯರಾದ ಶಂಕರಗೌಡ ಪಾಟೀಲ, ಜಿ.ಡಿ. ದೇಸಾಯಿ, ಲಕ್ಷ್ಮಣ ದೊಡ್ಡಮನಿ, ರವಿಕುಮಾರ ದೇಸಾಯಿ, ಶಿವನಗೌಡ ಪಾಟೀಲ, ಗಿರೀಶ ಕೋರಡ್ಡಿ, ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ನಿರ್ದೇಶಕರಾದ ರಮೇಶ ಜಕರಡ್ಡಿ, ರಮೇಶ ಶೇಭಾಣಿ, ಸಿದ್ದಣ್ಣ ದೇಸಾಯಿ, ತಿಮ್ಮಣ್ಣ ಅಮಲಝರಿ, ಶರಶ್ಚಂದ್ರ ಪಾಟೀಲ, ಹಣಮಂತ ಕೊಣ್ಣೂರ, ಹಣಮಂತ ಕಡಪಟ್ಟಿ,ಗಿರೀಶ ಪಾಟೀಲ ಶಿರಬೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT