ಮಂಗಳವಾರ, ಜೂನ್ 22, 2021
27 °C

ಬಾಳೆ ಬೆಳೆ ನಾಶ; ಪರಿಹಾರಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಸಂಗಾಪೂರ (ಎಸ್.ಎಸ್.) ಗ್ರಾಮದ ರೈತ ಬಸವರಾಜ ಕಾತ್ರಾಳ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಕೋವಿಡ್ ಲಾಕ್‍ಡೌನ್ ಹಾಗೂ ಇತ್ತೀಚೆಗೆ ಬೀಸಿದ ಬಿರುಗಾಳಿ, ಮಳೆಯ ಪರಿಣಾಮವಾಗಿ ನೆಲಕಚ್ಚಿದೆ.

ಕಾತ್ರಾಳ ಅವರು ಬೆಳೆದ ಬಾಳೆ ಹಣ್ಣನ್ನು ಲಾಕ್‌ಡೌನ್‌ ಪರಿಣಾಮ ವ್ಯಾಪಾರಸ್ಥರು ಖರೀದಿ ಮಾಡಿಕೊಂಡು ಹೋಗದೇ ಹೊಲದಲ್ಲೇ ಇತ್ತು. ಇನ್ನೇನು ಬೆಳೆದ ಬೆಳೆಯು ಕೈ ಸೇರಬೇಕೆನ್ನುವ ಹೊತ್ತಿನಲ್ಲಿ ಅಕಾಲಿಕ ಗಾಳಿ ಮಳೆಗೆ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ.

ಬಾಳೆಯನ್ನು ಖರೀದಿ ಮಾಡುವಂತೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಗೆ ಜಿಲ್ಲಾಡಳಿತ ಸೂಚಿಸಬೇಕು ಹಾಗೂ ಕಷ್ಟಪಟ್ಟು ಬೆಳೆದ ಬಾಳೆಗೆ ಪರಿಹಾರ ನೀಡುವಂತಾಗಬೇಕು ಎಂದು ರೈತ ಬಸವರಾಜ ಕಾತ್ರಾಳ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು