ನಾಲತವಾಡ: ‘ವಿದ್ಯಾರ್ಥಿಗಳು ವಚನ ಸಾಹಿತ್ಯದತ್ತ ಒಲವು ಬೆಳೆಸಿಕೊಳ್ಳಬೇಕು. ವಚನ ಸಾಹಿತ್ಯ ಜೀವನ ನಡೆಸುವ ಕ್ರಮವನ್ನು ತಿಳಿಸುತ್ತದೆ. ಬಸವಾದಿ ಶಿವಶರಣರು ಕನ್ನಡ ನಾಡಿನ ರತ್ನ, ಶರಣರ ವಚನಗಳಿಂದ ಕನ್ನಡ ಸಾಹಿತ್ಯ ಶ್ರೀಮಂತವಾಯಿತು’ ಎಂದು ಹುಬ್ಬಳ್ಳಿಯ ಅಸ್ತಮಾ ಅಲರ್ಜಿ ಆಸ್ಪತ್ರೆಯ ತಜ್ಞ ವೈದ್ಯ ಅಶೋಕ ಗುಡಗುಂಟಿ ಹೇಳಿದರು.

ನಾಲತವಾಡದ ಬಿಸಿಎಂ ಹಾಸ್ಟೆಲ್ನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮುರಾಳದ ಶರಣಿ ಸುಮಿತ್ರಾಬಾಯಿ ಸ್ಮರಣಾರ್ಥ ಏರ್ಪಡಿಸಲಾದ ಆಶುವಚನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಮಾತನಾಡಿದರು.

‘ಬಸವಾದಿ ಶರಣರ ವಚನ ಸಾಹಿತ್ಯದಲ್ಲಿರುವ ತತ್ವ ಆದರ್ಶಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಜೀವನದಲ್ಲಿ ಪ್ರಬುದ್ಧತೆ ಸಾಧಿಸಲು ವಚನದಿಂದ ಸಾಧ್ಯ. ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪು ನೀಡಿದ ಹನ್ನೆರಡನೇ ಶತಮಾನದ ವಚನಕಾರರ ವಚನ ಸಾಹಿತ್ಯದ ಜ್ಞಾನವನ್ನು ಪಠ್ಯದ ಜತೆಗೆ ಮೈಗೂಡಿಸಿಕೊಂಡಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ’ ಎಂದರು.

ಗುಳೇದಗುಡ್ಡದ ಕನ್ನಡ ಶಿಕ್ಷಕ ಸಂಗಮೇಶ ಕಡಿ, ಬಸವ ಕೇಂದ್ರದ ಅಧ್ಯಕ್ಷ ಶಂಭುಲಿಂಗಪ್ಪ ದುದ್ದಗಿ, ಎಸ್.ಎಲ್.ಗೊಳಸಂಗಿ, ಟಕ್ಕಳಕಿ, ಈರಮ್ಮ ಮುರುಡಿ ಮಾತನಾಡಿದರು.

ಶಿವಣ್ಣ ಶರಣರು, ಎಂ.ಎಸ್.ಗುಡಗುಂಟಿ, ಶ್ವೇತಾ ಗುಡಗುಂಟಿ, ಆರ್.ಎಸ್.ಹಿರೇಮಠ, ಎಸ್.ಐ.ಗೌಡರ, ಸಾಹಿತಿ ಅನ್ನಪೂರ್ಣ ಡೇರೇದ, ಎಲ್.ಎಂ.ಜೋಗಿ, ವಿದ್ಯಾರ್ಥಿನಿಲಯದ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.