ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ್ತಿ | ಮಾರುಕಟ್ಟೆಗೆ ಪೈಬರ್ ಹಲಿಗೆಗಳ ಲಗ್ಗೆ: ಕಣ್ಮರೆಯಾದ ಚರ್ಮದ ಹಲಿಗೆ

Published 25 ಮಾರ್ಚ್ 2024, 6:18 IST
Last Updated 25 ಮಾರ್ಚ್ 2024, 6:18 IST
ಅಕ್ಷರ ಗಾತ್ರ

ಹೊರ್ತಿ: ಶಿವರಾತ್ರಿಯ ಮಾರನೇಯ ದಿನ ಚಂದ್ರನ ದರ್ಶನವಾದರೆ ಸಾಕು, ಹಳ್ಳಿಗಳಲ್ಲಿ ಮಕ್ಕಳ, ಯುವಕರು ಹಲಿಗೆ ಸದ್ದು ಜೋರು.

ಹಳ್ಳಿಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಕಾಮಣ್ಣನ ಎದುರು ಹಲಿಗೆ ಬಾರಿಸುವುದು ಪುರಾತನ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಚರ್ಮದ ಹಲಿಗೆಗಳ ಬದಲಾಗಿ ಫೈಬರ್ ಹಲಿಗೆಗಳು ಮಾರುಕಟ್ಟೆಯನ್ನು ಲಗ್ಗೆ ಇಟ್ಟಿದ್ದರಿಂದ ಚರ್ಮದ ಹಲಿಗೆಗಳು ತೆರೆಮರೆಗೆ ಸರಿಯುತ್ತಿವೆ.

ಕಳೆದ ಕೆಲ ವರ್ಷಗಳ ಹಿಂದೆ ಗ್ರಾಮದ ಹರಿಜನಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬ ಬಂತೆಂದರೆ ಸಾಕು ಚಿಕ್ಕವರಿಂದ ದೊಡ್ಡವರು ಚರ್ಮದ ಹಲಿಗೆ ತಯಾರಕರ ಬಳಿ ಹೋಗಿ ತಮಗೆ ಇಷ್ಟವಾದ ಹಲಿಗೆಯನ್ನು ಹಣ ನೀಡಿ ಮುಂಗಡ ಕಾಯ್ದಿರಿಸಿ ಬರುತ್ತಿದ್ದರು. ಆದರೆ ಈಚೆಯ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪೈಬರ್ ಹಲಿಗೆಗಳಿಂದಾಗಿ ಪಾರಂಪರಿಕ ಚರ್ಮದ ಹಲಿಗೆಗರ ಬೇಡಿಕೆ ಕುಂದಿದೆ. ಇದರಿಂದ ಅವುಗಳನ್ನು ತಯಾರಿಸುತ್ತಿದ್ದ ಕುಟುಂಬಗಳೂ ತಮ್ಮ ಮೂಲ ಕಸುಬನ್ನು ಬದಿಗೆ ಸರಿಸಿದೆ. ಈಗೀಗ ಚರ್ಮದ ಹಲಿಗೆ ಬಾರಿಸುವುದಂತು ದೂರದ ಮಾತು. ನೋಡಲು ಅಪರೂಪವಾಗಿವೆ.

ಈ ಸದ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಫೈಬರ್ ಹಲಿಗೆಗಳ ಬೆಲೆ ಕಡಿಮೆಯಾಗಿದ್ದರಿಂದ ಹೋಳಿ ಹಬ್ಬದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಅವು ಯಶಸ್ವಿಯಾಗಿವೆ. ಚಿಕ್ಕವರಿಂದ ದೊಡ್ಡವರಿಗೆ ಬಾರಿಸಲು ಅನುಕೂಲವಾಗುವಂತಹ ವಿವಿಧ ಮಾದರಿಯಲ್ಲಿ ಸಿಗುವ ಈ ಹಲಿಗೆಗಳು ಗ್ರಾಹಕರಿಗೆ ಕೈಗೆಟುವ ದರದಲ್ಲಿ ಲಭ್ಯವಾಗುತ್ತಿವೆ. ಮಕ್ಕಳಿಗೆ ಪೈಬರ್ ಹಲಿಗೆಗಳು ಅವರ ಅಚ್ಚು ಮೆಚ್ಚಿನ ಆಟಿಕೆಗಳಲ್ಲಿ ಒಂದಾಗಿದೆ. ವಿಪರ್ಯಾಸವೆಂದರೆ ಅದನ್ನು ಬಾರಿಸಿದಾಗ ಹೊರಡುವ ಕರ್ಕಶ ಶಬ್ದದಿಂದ ಜನ ರೋಸಿ ಹೋಗಿದ್ದಾರೆ.

ಒಟ್ಟಾರೆಯಾಗಿ ಜಾನಪದ ಹಾಡುಗಳಿಗೆ ಮೆರುಗು ಕೊಡುವ ಚರ್ಮದ ವಾದ್ಯಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ ಫೈಬರ್ ಹಲಿಗೆಗಳು ಜನಾಕರ್ಷಣೆ ಹಾಗೂ ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ಇವುಗಳ ಭರ್ಜರಿ ಮಾರಾಟದಿಂದ ಇತಿಹಾಸ ಪ್ರಸಿದ್ದಿ ಪಡೆದಿರುವ ಚರ್ಮದ ಹಲಿಗೆಗಳು ಮಾಯವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ತುಕಾರಾಮ ಪೂಜಾರಿ ಕನಕನಾಳ.
'ಕಳೆದ ಹತ್ತಾರು ವರ್ಷಗಳ ಹಿಂದೆ ಹೋಳಿ ಹಬ್ಬದಲ್ಲಿ ಬಾರಿಸಲು ಚರ್ಮದ ಹಲಿಗೆಗಳನ್ನು ಉಪಯೋಗಿಸುತ್ತಿದ್ದರು. ಆದರೆ ಅವುಗಳನ್ನು ತಯಾರಿಸುವ ಕುಟುಂಬಗಳು ಕಾರಣಾಂತರಗಳಿಂದ ಹಲಿಗೆ ತಯಾರಿಸುವ ಕೆಲಸ ನಿಲ್ಲಿಸಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಬಂದಿರುವ ಫೈಬರ್ ಹಲಿಗೆಗಳ ಕರ್ಕಶ ನಾದ ಕೇಳುವಂತಾಗಿದೆ ಅಲ್ಲದೇ ಜನರ ನಿದ್ದೆಯ ಜೊತೆಗೆ ನೆಮ್ಮದಿಯ ಬಂಗವಾಗತ್ತಿದೆ ಎನ್ನುತ್ತಾರೆ'. .
- ಶ್ರೀಶೈಲ ಏಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT