ಬುಧವಾರ, ಮೇ 12, 2021
25 °C

ಶಿಷ್ಯವೇತನ ಕಡಿತ; ವಿದ್ಯಾರ್ಥಿನಿಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನ ಕಡಿತ ಮಾಡಿರುವುದನ್ನು ವಿರೋಧಿಸಿ ಡೆಮಾಕ್ರಟಿಕ್ ರಿಸರ್ಚ್ ಸ್ಕಾಲರ್ಸ್ ಆರ್ಗನೈಸೇಷನ್ (ಡಿಆರ್‌ಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಡಿಆರ್‌ಎಸ್‌ಒ ಸದಸ್ಯೆ ಗೀತಾ.ಎಚ್ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿರುವಾಗ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನವನ್ನು ₹15 ಸಾವಿರದಿಂದ ₹8 ಸಾವಿರಕ್ಕೆ  ಕಡಿತಗೊಳಿಸಿದ್ದಾರೆ ಹಾಗೂ ಪ್ರಗತಿ ವರದಿ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.

ಸಂಶೋಧನಾ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಇದ್ದರೂ ಅದರ ಶುಲ್ಕ ಕೂಡ ಜಾಸ್ತಿಯಾಗಿದೆ. ಹಾಗೂ ಐದು ತಿಂಗಳಿಂದ ಶಿಷ್ಯವೇತನವನ್ನು ನೀಡಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡಬೇಕಾಗಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಇರುವುದು ಏಕೈಕ ಮಹಿಳಾ ವಿಶ್ವವಿದ್ಯಾನಿಲಯ. ಸಾಕಷ್ಟು ವಿದ್ಯಾರ್ಥಿನಿಯರು ಬಡತನದಿಂದಲೇ ಸಂಶೋಧನೆಗೆ ಬರುತ್ತಾರೆ. ಆದ್ದರಿಂದ ಈ ಕೂಡಲೇ ನಿಗದಿಪಡಿಸಿದ ಶಿಷ್ಯವೇತನವನ್ನು ಬಿಡುಗಡೆಮಾಡಬೇಕು ಹಾಗೂ ಹಾಸ್ಟಲ್ ಸಮಸ್ಯೆ ಮತ್ತು ಪ್ರಗತಿ ವರದಿ ಶುಲ್ಕವನ್ನು ಕೂಡ ಕಡಿಮೆಮಾಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ದೀಪಾಲಿ, ತ್ರಿವೇಣಿ, ಗೀತಾ ರಾಠೋಡ, ವಿಜಯಲಕ್ಷ್ಮೀ, ಜ್ಞಾನಸುಂದರಿ, ಲಕ್ಷ್ಮೀ  ಮತ್ತಿತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು