ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಬಿತ್ತನೆ ಬೀಜ ವಿತರಣೆ

Published 3 ಜೂನ್ 2024, 16:08 IST
Last Updated 3 ಜೂನ್ 2024, 16:08 IST
ಅಕ್ಷರ ಗಾತ್ರ

ತಿಕೋಟಾ: ‘ಉತ್ತಮವಾಗಿ ಮುಂಗಾರು ಮಳೆ ಆಗುತ್ತಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಹೆಸರು, ತೊಗರಿ, ಸಜ್ಜೆ, ಗೋವಿನ ಜೋಳದ ಬೀಜಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಕೃಷಿ ಅಧಿಕಾರಿ ಟಿ.ಎ.ಸೋಲಾಪೂರಕರ ಹೇಳಿದರು.

‘ತಾಲ್ಲೂಕಿನ ತಿಕೋಟಾ, ಹೊನವಾಡ, ಟಕ್ಕಳಕಿ, ಕೋಟ್ಯಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜಗಳನ್ನು ವಿತರಿಸಲಾಗುತ್ತಿದೆ. ಕಡ್ಡಾಯವಾಗಿ ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಕೊಡಲಾಗುತ್ತದೆ’ ಎಂದರು.

ರಾಮಣ್ಣ ಬೀದರಿ,ಪ್ರವೀಣ ಕಾತ್ರಾಳ, ಮುತ್ತು ಶಿರಹಟ್ಟಿ, ಲೆಕ್ಕಿಗ ಕೀರಣ ಜತ್ತಿ ತಾಂತ್ರಿಕ ಸಾಹಾಯಕ ಎಂ. ಎಂ. ಬಾಳಿಕಾಯಿ, ಸಿದ್ದು ತೇಲಿ ವಿಷ್ಣು ಕುಂಬಾರ, ರೈತರಾದ ಶಿವಪ್ಪ ಇಂಚಗೇರಿ, ರುದ್ರಯ್ಯಾ ಸಾಲಿಮಠ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT