ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನ ಮರೆಯದಿರಿ: ಎಸ್.ಎಸ್.ಗಡೇದ

Published 14 ಆಗಸ್ಟ್ 2024, 15:57 IST
Last Updated 14 ಆಗಸ್ಟ್ 2024, 15:57 IST
ಅಕ್ಷರ ಗಾತ್ರ

ತಾಳಿಕೋಟೆ:‘ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನಗಳನ್ನು ಮರೆಯಬಾರದು. ದೇಶಪ್ರೇಮ ಆಚರಣೆಗಳಂದು ಮಾತ್ರ ದೇಶಪ್ರೇಮ ಅರಳದೆ ಅದು ನಮ್ಮ ನಡುವಳಿಕೆಯಾಗಿ ಬದಲಾಗಬೇಕು’ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.

ಅವರು ಸ್ಥಳೀಯ ವಿಪಿಎಂ ಪ್ರಾಥಮಿಕ ಹಾಗೂ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

’ವಿವಿಧತೆಯೇ ಈ ನೆಲದ ವೈಶಿಷ್ಟ್ಯ. ಎಲ್ಲ ಜನಾಂಗ, ಧರ್ಮದವರು ಒಂದಾಗಿ ದೇಶದ ಘನತೆ ಎತ್ತಿ ಹಿಡಿಯಬೇಕು. ಬಾಲ್ಯದಿಂದಲೇ ನಮ್ಮ ಸಂಸ್ಕೃತಿ, ಪರಂಪರೆಗಳಲ್ಲಿನ ಮೌಲ್ಯಗಳನ್ನು ಗುರುತಿಸಿ ಅನುಸರಣೆ ಮಾಡಬೇಕು’ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಫಾ.ರಾಬರ್ಟಕ್ರಾಸ್ತಾ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಸಿ. ಐರಿನ್ ಥೌರೋ, ಶಿಕ್ಷಕ ನಾಗಭೂಷಣ, ವಿಶ್ವನಾಥ ಪಾಟೀಲ, ಜ್ಯೋತಿ ನಾರಿ ಹಾಗೂ ಸನ್ಮಾನಿತರು ಇದ್ದರು.

ಹಿಂದಿ ಶಿಕ್ಷಕ ಗಣೇಶ, ದೈಹಿಕಶಿಕ್ಷಣ ಶಿಕ್ಷಕ ಈರಪ್ಪ ಸಜ್ಜನ, ಸೇವಾ ನಿವೃತ್ತಿಯಾದ ಸತೀಶ ಕುಲಕರ್ಣಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೇ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿದ್ಯಾರ್ಥಿನಿಯರಾದ ದರ್ಶಿತಾ ಮಹೀಂದ್ರಕರ ಮತ್ತು ಫೈಜನಾಜ ಖರೋಬಾ ಸ್ವಾಗತಿಸಿ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

ತಾಳಿಕೋಟೆಯ ವಿಪಿಇಎಂ ಸೆಕ್ರೆಡ್ ಹಾರ್ಟ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಮುನ್ನಾದಿನ ಬುಧವಾರ ಆಯೋಜಿಸಿದ್ದ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು   “ಬಾಲ್ಯ ವಿವಾಹ ಬೇಡ”ನಾಟಕ ಪ್ರದರ್ಶನ ನೀಡಿದರು
ತಾಳಿಕೋಟೆಯ ವಿಪಿಇಎಂ ಸೆಕ್ರೆಡ್ ಹಾರ್ಟ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಮುನ್ನಾದಿನ ಬುಧವಾರ ಆಯೋಜಿಸಿದ್ದ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು   “ಬಾಲ್ಯ ವಿವಾಹ ಬೇಡ”ನಾಟಕ ಪ್ರದರ್ಶನ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT