ವಿಜಯಪುರ: ತಿಕೋಟಾ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರಿ 10.32ಕ್ಕೆ ಭೂಕಂಪನದ ಅನುಭವವಾಗಿದೆ.

ಭೂಮಿಯೊಳಗಿನಿಂದ ಹೊರಹೊಮ್ಮಿದ ಜೋರಾದ ಶಬ್ದಕ್ಕೆ ಜನ ಹೆದರಿ ಗಾಬರಿಯಿಂದ ಮನೆಗಳಿಂದ ಹೋರ ಓಡಿ ಬಂದಿದ್ದಾರೆ.

ಮನೆಯ ಪತ್ರಾಸ್ ಕೂಡ ದಡದಡ ಶಬ್ದ ಮಾಡಿದೆ.

ನಾಯಿ ಸೇರಿದಂತೆ ಪ್ರಾಣಿ, ಪಕ್ಷಿಗಳು ಜೋರಾಗಿ ಚೀರಿಕೊಂಡಿವೆ ಎಂದು ಜನರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಆರೇಳು ಬಾರಿ ಭೂಕಂಪನವಾಗಿದೆ. ಆದರೆ, ಇಂದು ಸಂಭವಿಸಿದ ಭೂಕಂಪದ ತೀವ್ರತೆ ಹೆಚ್ಚಿತ್ತು ಎಂದು ಜನರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.