ಭಾನುವಾರ, ನವೆಂಬರ್ 1, 2020
19 °C

ಉಕ್ಕಿ ಹರಿದ ಡೋಣಿ: ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಕೋಟಾ: ನಿರಂತರ ಮಳೆಯಿಂದ ಡೋಣಿ ನದಿ ಉಕ್ಕಿ ಹರಿದಿದ್ದು, ಈ ಭಾಗದ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ ಅಪಾರ ಪ್ರಮಾಣದ ಬೇಳೆ ನಾಶವಾಗಿದೆ.

ಬಬಲೇಶ್ವರ ತಾಲ್ಲೂಕಿನ ದಾಸ್ಯಾಳ, ದನ್ಯಾಳ, ಕಣಮುಚನಾಳ, ಕೊಟ್ಯಾಳ, ಸಾರವಾಡ, ತೊನಸ್ಯಾಳ ಗ್ರಾಮಗಳು ಡೋಣಿ ನದಿಯ ದಡದಲ್ಲಿವೆ.  ಇಲ್ಲಿನ 250 ಹೆಕ್ಟೇರ್‌ ಜಮೀನಿನಲ್ಲಿ ಫಸಲಿಗೆ ಬಂದ ತೊಗರಿ, ಉಳ್ಳಾಗಡ್ಡಿ, ಹತ್ತಿ ಹಾಗೂ ಬಿತ್ತನೆ ಮಾಡಿದ ಕಡಲೆ ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ತೊಗರಿ ಹಾಗೂ ಉಳ್ಳಾಗಡ್ಡಿಯೂ ನದಿ ಪ್ರವಾಹದಿಂದ ನಾಶವಾಗಿ, ರೈತರಿಗೆ ಕಣ್ಣೀರು ತರಿಸಿದೆ.

ದಾಸ್ಯಾಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ಬಂದಿದೆ. ಇದರಿಂದ ಜನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ದಸ್ಯಾಳ ಗ್ರಾಮಕ್ಕೆ ಹೋಗಲು ಸೇರುವೆ ನಿರ್ಮಾಣವಾಗುತ್ತಿದ್ದು,ಯಂತ್ರೋಪಕರಣಗಳು, ವಾಹನಗಳು ದೋಣಿ ಪ್ರವಾಹದಲ್ಲಿ ಮುಳುಗಡೆಯಾಗಿವೆ. ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳು ಸಹ ಜಲಾವೃತವಾಗಿವೆ.

ಬಬಲೇಶ್ವರ ಶಾಸಕ ಎಂ.ಬಿ‌.ಪಾಟೀಲ ಡೋಣಿ ನದಿ ಪ್ರವಾಹದ ಕುರಿತು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಡೋಣಿ ನದಿ ಪಾತ್ರದ ಜನರಿಗೆ ಸೂಕ್ತ ಸೌಲಭ್ಯ ಒದಗಿಸಲು, ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.