ಬಸವನಬಾಗೇವಾಡಿ: ಪಟ್ಟಣದ ಅಗಸಿ ಒಳಗಡೆ ಶಹರ ಗಜಾನನ ಮಂಡಳಿಯವರು ಪ್ರತಿಷ್ಠಾಪಿಸಿದ ಗಣೇಶಮೂರ್ತಿಯ ವಿಸರ್ಜನೆಯು ಮಂಗಳವಾರ ಸಂಜೆ ಸಂಭ್ರಮದಿಂದ ನಡೆಯಿತು.

ಸಂಜೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರದ್ಧಾ ಭಕ್ತಿಯಿಂದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಜ್ಯೋಗಿ ಆರ್ಟ್ಸ್ ಕುತ್ತಾರ, ಮಂಗಳೂರಿನ ರಕ್ಷಿತ್ ನೇತೃತ್ವದ ಅಘೋರಿಗಳ ವೇಷಧಾರಿಗಳು, ವೀರ ಹನುಮಾನ ವೇಷದಾರಿಗಳು, ಹುಲಿ ಕುಣಿತ, ಕೇರಳದ ಚಂಡೆ ಮೇಳ ಕಲಾ ತಂಡಗಳು ಗಮನ ಸೆಳೆದವು.

ಮಂಡಳಿಯವರು 11 ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎತ್ತಿನ ಬಂಡಿ ಜಗ್ಗುವುದು ಸೇರಿದಂತೆ ವಿವಿಧ ಗ್ರಾಮೀಣ ಸೋಗಡಿನ ಸ್ಪರ್ಧೆಗಳನ್ನು ಎರ್ಪಡಿಸಿದ್ದರು.

‘ಈಚೆಗೆ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್, ಬಾಜಾ, ಬಜಂತ್ರಿ ಹಚ್ಚುವುದು ಸಾಮಾನ್ಯವಾಗಿದೆ. ಆದರೆ ಶಹರ ಗಜಾನನ ಮಂಡಳಿಯವರು ಕಳೆದ 70 ವರ್ಷಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅರ್ಥಪೂರ್ಣ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ವಿವಿಧ ವಿಶೇಷ ಕಲಾ ತಂಡಗಳನ್ನು ಕರೆಸುತ್ತಿರುವುದು ಇತರರಿಗೆ ಮಾದರಿ’ ಎಂದು ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಹೇಳಿದರು.

ಮೆರವಣಿಗೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಗುರುಸಿದ್ದಯ್ಯ ಹಿರೇಮಠ, ಶಹರ ಗಜಾನನ ಮಂಡಳಿ ಗೌರವಾಧ್ಯಕ್ಷ ಶಿವಾನಂದ ತೊಳನೂರ, ಅಧ್ಯಕ್ಷ ಸುರೇಶ ಹಾರಿವಾಳ, ರವಿಗೌಡ ಚಿಕ್ಕೊಂಡ, ಮುತ್ತು ನಾಲತವಾಡ, ಪ್ರವೀಣ ಚಿಕ್ಕೊಂಡ, ಸಂತೋಷ ಹಾರಿವಾಳ, ಮಹಾಂತೇಶ ಹಾರಿವಾಳ, ಸಂಗು ಮೈಲೇಶ್ವರ, ಸಚಿನ ಹಾರಿವಾಳ, ಸಂಗಮೇಶ ಹಾರಿವಾಳ, ಸತೀಶ ಕ್ವಾಟಿ, ವಿಶಾಲ ಗಾಯಕವಾಡ, ಪ್ರಶಾಂತ ಬಶೆಟ್ಟಿ, ಪ್ರಶಾಂತ ಮುಂಜಾನೆ, ಶಶಿಕಾಂತ ಸ್ಥಾವರಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.