ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಧಾರಾಕಾರ ಮಳೆ

Published 3 ಸೆಪ್ಟೆಂಬರ್ 2023, 14:08 IST
Last Updated 3 ಸೆಪ್ಟೆಂಬರ್ 2023, 14:08 IST
ಅಕ್ಷರ ಗಾತ್ರ

ವಿಜಯಪುರ: ಸುಮಾರು ಒಂದು ತಿಂಗಳ ಬಳಿಕ ವಿಜಯಪುರ ನಗರದಲ್ಲಿ ಭಾನುವಾರ ಸಂಜೆ ಅರ್ಧ ತಾಸು ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. 

ವಿಜಯಪುರ ತಾಲ್ಲೂಕಿನ ಕನ್ನೂರ, ತಿಡಗುಂದಿ, ಭೂತನಾಳ ಭಾಗಳಲ್ಲಿ ಉತ್ತಮ ಮಳೆಯಾಗಿದೆ. ಸಿಂದಗಿ, ಇಂಡಿ ವ್ಯಾಪ್ತಿಯಲ್ಲಿ ಕೆಲಸ ಹೊತ್ತು ಜಿಟಿಜಿಟಿ ಮಳೆಯಾಗುತ್ತಿದೆ.

ಮಳೆ ಇಲ್ಲದೇ ಬೆಳೆಗಳು ಒಣಗಿ ಬರ ಆವರಿಸಿದ್ದು, ಬಿಸಿಲ ಬೇಗೆ ತಾಳದೇ ಜಿಲ್ಲೆಯ ಜನ ಹೈರಾಣಾಗಿದ್ದರು. ಭಾನುವಾರ ಸುರಿದ ಮಳೆ ಇಳೆಯನ್ನು ತಂಪಾಗಿಸಿತು. ಆಗಸದಲ್ಲಿ ಬೆಳಿಗ್ಗೆಯಿಂದ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಎರಡು ವಾರಗಳಿಂದ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಬೇಸಿಗೆ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT