ಇಂಡಿ: ‘ಇಂದಿನ ಜಗತ್ತಿನಲ್ಲಿ ವ್ಯವಹಾರ ಚತುರತೆ ಎಲ್ಲರಿಗೂ ಅತ್ಯಗತ್ಯ. ಆರ್ಥಿಕ ಸಾಕ್ಷರತೆಯು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ, ಅವರ ಜ್ಞಾನವನ್ನು ಹೆಚ್ಚಿಸುತ್ತದೆ’ ಎಂದು ವಿಜಯಪುರದ ಆರ್ಥಿಕ ಸಾಕ್ಷರತೆ ಸಲಹೆಗಾರ ಈರೇಶ ಡಂಗಿ ಹೇಳಿದರು.

ತಾಲ್ಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಸಾಕ್ಷರತೆ-ಅರಿವು ಕಾರ್ಯಕ್ರಮ’ ವನ್ನು ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳಿಗೆ ಹಣದ ವಹಿವಾಟಿನ ಅರಿವು ಇದ್ದಾಗ, ಉಳಿತಾಯದ ಮಹತ್ವ ತಿಳಿಯುವರು. ತಾವು ಸಂಗ್ರಹಿಸಿದ ಹಣವನ್ನು ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಇಂಡಿ ಆರ್ಥಿಕ ಸಾಕ್ಷರತೆ ಸಲಹೆಗಾರ ಭರತೇಶ ಉಪಾಧ್ಯ ಮಾತನಾಡಿ, ‘ಮಕ್ಕಳಿಗೆ ದೈನಂದಿನ ಹಣಕಾಸಿನ ವಹಿವಾಟಿನ ಪರಿಚಯ ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ಕುಟುಂಬದ ಖರ್ಚು-ವೆಚ್ಚಗಳ ಮಾಹಿತಿ ತಿಳಿದು, ವಹಿವಾಟಿನ ಕೌಶಲ ಬೆಳಯುತ್ತದೆ’ ಎಂದು ಹೇಳಿದರು.

ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.

ಶಿಕ್ಷಕರಾದ ಎನ್.ಬಿ.ಚೌಧರಿ, ಎಸ್.ಪಿ.ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.