ಮಂಗಳವಾರ, ಮಾರ್ಚ್ 21, 2023
28 °C

‘ಸಿದ್ದೇಶ್ವರ ಶ್ರೀ’ ವಿಶ್ವದಾಖಲೆ ಕವನ ರಚನೆಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀ ಆದರ್ಶ ಜೀವನದ ಕುರಿತು 500 ಕವಿಗಳಿಂದ ಏಕಕಾಲದಲ್ಲಿ ಕವನ ರಚಿಸಿ, ವಿಶ್ವ ದಾಖಲೆ ಮಾಡಲು ನಿರ್ಧರಿಸಲಾಗಿದೆ ಎಂದು ಧಾರವಾಡದ ಕನ್ನಡ ಬುಕ್‌ ಆಫ್‌ ರೆಕಾರ್ಡ್ಸ್‌ನ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಬಾರಗೇರ ತಿಳಿಸಿದ್ದಾರೆ.

ಚೆನ್ನೈನ ಯೂನಿರ್ವಸಲ್‌ ಅಚಿವರ್ಸ್‌ ಬುಕ್‌ ಆಫ್‌ ರೆಕಾಡ್ಸ್‌ ಸಹಯೋಗದಲ್ಲಿ ಮಾರ್ಚ್‌ 19ರಂದು ವಿಜಯಪುರದ ಜ್ಞಾನ ಯೋಗಾಶ್ರಮದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದ 500 ಕವಿಗಳಿಂದ ಏಕಕಾಲದಲ್ಲಿ ಸಿದ್ಧೇಶ್ವರ ಶ್ರೀಗಳ ಕುರಿತು 20 ನಿಮಿಷ 23 ಸೆಕೆಂಡ್ ಗಳಲ್ಲಿ ಕವನ, ಪ್ರಬಂಧ ಬರೆಯುವ ಮೂಲಕ ವಿಶ್ವದಾಖಲೆ ಬರೆಯಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಮಾಡುವ ಈ ವಿಶ್ವ ದಾಖಲೆಯ ಕಾರ್ಯಕ್ರಮಕ್ಕೆ ಸಾಹಿತಿಗಳು ಮತ್ತು ಯುವ ಕವಿಗಳು ಭಾಗವಹಿಸಬಹುದಾಗಿದೆ ಎಂದು ಹೇಳಿದರು.

ಅಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕವಿಗಳು, ಸಾಹಿತಿಗಳಿಗೆ  ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಅವರು ವಸತಿ ಮತ್ತು ಪ್ರಸಾದದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ದಾಖಲಾಗುವ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಭಾಗವಹಿಸುವ ಎಲ್ಲ ಕವಿಗಳಿಗೆ ವಿಶ್ವ ದಾಖಲೆಯ ಪ್ರಮಾಣಪತ್ರ ಮತ್ತು ಕನ್ನಡ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರ ದೊರೆಯಲಿದೆ ಎಂದು ತಿಳಿಸಿದರು.

ಈ ವಿಶ್ವ ದಾಖಲೆ ಕಾರ್ಯಕ್ರಮ ಮಾರ್ಚ್‌ 19ರಂದು ಬೆಳಿಗ್ಗೆ10ಕ್ಕೆ ವಿಜಯಪುರ  ಜ್ಞಾನ ಯೋಗಾಶ್ರಮದಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ಕವಿಗಳು ಮಾರ್ಚ್‌ 8ರ ಒಳಗೆ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.

ಮಾಹಿತಿ ಮತ್ತು ಹೆಸರು ನೋಂದಾಣಿಗಾಗಿ ಮಂಜುನಾಥ ಬಾರಗೇರ ಅವರ ಮೊಬೈಲ್‌ ಸಂಖ್ಯೆ 9886262204/8904174406 ಅಥವಾ ಬಾಗಲಕೋಟೆಯ ಸದಾನಂದ ಏಳಗಂಟಿ ಅವರ ಮೊ.ನಂ. 9945102011 ಅಥವಾ ವಿಜಯಪುರದ ಶಂಕರ ಬೈಜಬಾಳ ಅವರ ಮೊ.ನಂ. 9448751980 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು