ಶನಿವಾರ, ಡಿಸೆಂಬರ್ 3, 2022
20 °C

ಜೆಡಿಎಸ್‌ ಪಕ್ಷ, ಶಾಸಕರು ದಾಬಾ ಇದ್ದಂತೆ: ಆಲಗೂರ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜೆ.ಡಿ.ಎಸ್ ಮತ್ತು ಆ ಪಕ್ಷದ ಶಾಸಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದಾಬಾಗಳು ಇದ್ದಂತೆ. ಅವರು ಇದ್ದ ಸ್ಥಳದಲ್ಲಿ ವ್ಯಾಪಾರ ಸರಿಯಾಗಿ ನಡೆದರೆ ಅಲ್ಲಿಯೇ ಇರುತ್ತಾರೆ, ವ್ಯಾಪಾರ ಸರಿ ಇಲ್ಲದಿದ್ದರೆ ಬೇರೊಂದು ಕಡೆ ಸ್ಥಳಾಂತರಗೊಳ್ಳುತ್ತಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ಲೇವಡಿ ಮಾಡಿದ್ದಾರೆ.

ನಾಗಠಾಣ ಶಾಸಕರಾದ ದೇವಾನಂದ ಚವ್ಹಾಣ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದು ಊಹಾಪೂಹ. ಅಲ್ಲದೇ, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಕೂಡಾ ಶುದ್ಧ ಸುಳ್ಳು. ಮತಕ್ಷೇತ್ರದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ನಾಗಠಾಣ ವಿಧಾನಸಭೆ ಚುನಾವಣೆಗೆ ನಾನು ತಯಾರಿ ನಡೆಸುತ್ತಿದ್ದೇನೆ. ಶಾಸಕರಾದ ದೇವಾನಂದ ಚವ್ಹಾಣ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆಹ್ವಾನಿಸಿರುವುದಿಲ್ಲ. ಆದರೂ ಕೆಲವೊಬ್ಬರು ಕಾಂಗ್ರೆಸ್ ಸೇರ್ಪಡೆ ಖಚಿತ ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು