ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಅಪಹರಣ: ನಾಲ್ವರು ಆರೋಪಿಗಳ ಬಂಧನ

Last Updated 1 ಸೆಪ್ಟೆಂಬರ್ 2022, 13:41 IST
ಅಕ್ಷರ ಗಾತ್ರ

ವಿಜಯಪುರ: ಮಹಿಳೆಯೊಬ್ಬರನ್ನು ಅಪಹರಣಮಾಡಿ, ಹಣಕ್ಕೆ ಬೇಡಿಕೆಯಿಟ್ಟದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ವಿಜಯಪುರ ನಗರದ ಜುಲೈ ಗಲ್ಲಿಯ ಸಾಗರ ಜುಮ್ಮನಗೋಳ, ರಂಗಿನ ಮಜ್ಜಿದ್‌ನ ಶಿವಾಜಿ ಉಪ್ಪಾರ, ರಾಣಿ ಬಗೀಚದ ಆಕಾಶ ವೀರಕರ ಮತ್ತು ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು.

ಇಂಡಿಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವಲಕ್ಷ್ಮಿ ಸೊನ್ನದ ಅವರು ಆಗಸ್ಟ್‌ 22ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ನಗರದಕನಕದಾಸ ವೃತ್ತದ ಬಳಿ ಆರೋಪಿಗಳು ಆಟೋದಲ್ಲಿ ಅಪಹರಣ ಮಾಡಿ, ₹ 5 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದರು.

ಸರ್ಕಾರಿ ಕೆಲಸದಲ್ಲಿದ್ದ ಪತಿ ಜಗದೀಶ ಸೊನ್ನಾದ ಅವರು ಆಕಸ್ಮಿಕವಾಗಿ ಸಾವಿಗೀಡಾದ ಬಳಿಕ ಅನುಕಂಪದ ಆಧಾರದ ಮೇಲೆ ಲಕ್ಷ್ಮಿ ಅವರಿಗೆ ಸರ್ಕಾರಿ ಕೆಲಸ ಲಭಿಸಿತ್ತು. ಕೆಲಸ ಸಿಕ್ಕಿದ ಹಿನ್ನೆಲೆಯಲ್ಲಿ ತಮಗೂ ಹಣ ನೀಡಬೇಕು ಎಂದುಸಂಬಂಧಿಕರೇ ಸೇರಿಕೊಂಡು ಅಪಹರಣ ಮಾಡಿದ್ದರು ಎನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT