ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ವಕೀಲ ಸೈಯದ್ ಆಸೀಫ್ವುಲ್ಲಾ ಖಾದ್ರಿ ಎಂಬುವವನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದು, ಕೋರ್ಟ್ಗೆ ಹಾಜರು ಪಡೆದಿದ್ದಾರೆ.

‘ನಗರದ ಎಸ್.ಎಸ್.ಪ್ರೌಢಶಾಲೆ ಮುಂದೆ ಕಟ್ಟಿಸುತ್ತಿರುವ ಮಂದಿರದ ಬಗ್ಗೆ ಹಾಗೂ ವಕ್ಫ್ ಬೋರ್ಡ್ನಿಂದ ಕಟ್ಟಿಸುತ್ತಿರುವ ಮಸೀದಿಗಳ ಬಗ್ಗೆ ಶಾಸಕ ಯತ್ನಾಳ ವಿರೋಧ ಮಾಡುತ್ತಿದ್ದಾರೆ’ಎಂದು ವಕೀಲ ಸೈಯದ್ ಆಸೀಫ್ವುಲ್ಲಾ ಖಾದ್ರಿ ಅವರು ಗುರುವಾರಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ಮತೀಯ ಗಲಭೆ ಹಬ್ಬಿಸುಲು ಮುಂದಾಗಿದ್ದಾರೆ’ ಎಂದು ಆರೋಪಿಸಿ ಗೋಳಗುಮ್ಮಟ ಠಾಣೆಯಲ್ಲಿ ಬಾಪುಗೌಡ ಪಾಟೀಲ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿಸೈಯದ್ ಆಸೀಫ್ವುಲ್ಲಾ ಖಾದ್ರಿ ಅವರನ್ನು ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸಿದ್ದಾರೆ.

ವಿರೋಧ: ಸೈಯದ್ ಆಸೀಫ್ವುಲ್ಲಾ ಖಾದ್ರಿ ಬಂಧನ ವಿರೋಧಿಸಿ ಅವರ ಬೆಂಬಲಿಗರು ಠಾಣೆ ಎದುರು ಜಮಾಯಿಸಿದ್ದರು. ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.