ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಮೋದಿ ನಾಯಕತ್ವ ಅಗತ್ಯ: ಸಂಸದ ರಮೇಶ ಜಿಗಜಿಣಗಿ

Published 7 ಏಪ್ರಿಲ್ 2024, 14:22 IST
Last Updated 7 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪ್ರಧಾನಿ ಮೋದಿಯವರ ದೂರದೃಷ್ಟಿಯ ಫಲವಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರದ ಒಂದೊಂದು ಯೋಜನೆಯ ಲಾಭ ಪಡೆದುಕೊಳ್ಳುವಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲ್ಲೂಕಿನ ಕೋರವಾರದಲ್ಲಿ ಇತ್ತೀಚಿಗೆ ಜರುಗಿದ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ಸಮ್ಮಾನ್‌, ಉಜ್ವಲ್‌, ಆತ್ಮನಿರ್ಭರ ನಿಧಿ, ಅಗ್ನಿಪಥ, ಗರೀಬ್ ಕಲ್ಯಾಣ ರೋಜಗಾರ್ , ಮತ್ಸ್ಯ ಸಂಪದ, ಜಲಜೀವನ ಮೀಷನ್, ಆಯುಷ್ಮಾನ್ ಭಾರತ, ಮಾತೃತ್ವ ವಂದನಾ, ಫಸಲಭೀಮಾ, ಕೃಷಿ ಸಿಂಚಾಯಿ, ಆವಾಸ್, ಅಟಲ್ ಪಿಂಚಣಿ, ಸುಕನ್ಯಾ ಸಮೃದ್ಧಿ, ಭಾರತೀಯ ಜನೌಷಧಿ ಸೇರಿದಂತೆ ನೂರಾರು ಯೋಜನೆಗಳನ್ನು ರಾಷ್ಟ್ರದ ಪ್ರತಿ ಪ್ರಜೆಯ ಕಲ್ಯಾಣಕ್ಕಾಗಿ ಆರಂಭಿಸಿದ್ದು, ಇಂದು ಇವುಗಳೆಲ್ಲಾ ಮನೆ ಮಾತಾಗಿವೆ. ಮುಂದಿನ ದಿನಗಳಲ್ಲಿ ಭಾರತೀಯರ ಅಭಿವೃದ್ಧಿಗೆ ಮೋದಿಯವರ ನಾಯಕತ್ವ ಅಗತ್ಯ. ಆದ್ದರಿಂದ ನಾವೆಲ್ಲ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸೋಣ ಎಂದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಜಿಲ್ಲೆಯ ಕಳಂಕರಹಿತ ರಾಜಕಾರಣಿಯಾಗಿ ರಮೇಶ ಜಿಗಜಿಣಗಿ ಸದ್ದಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರಿಗೆ ಮತ್ತೊಮ್ಮೆ ಅವಕಾಶ ನೀಡುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಹೆಚ್ಚಿಸೋಣ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ಈ ಬಾರಿಯ ಚುನಾವಣೆ ಧರ್ಮ ಹಾಗೂ ಅಧರ್ಮಗಳ ನಡುವಿನ ಹೋರಾಟ. ಈ ಹೋರಾಟದಲ್ಲಿ ಬಿಜೆಪಿಗೆ ಮತ ನೀಡಿ ಮೋದಿಯವರ ನಾಯಕತ್ವದಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಕಂಕಣಬದ್ಧರಾಗೋಣ ಎಂದರು.

ವಿಧಾನ ಪರಿಷತ್ ಮಾಜಿಸದಸ್ಯ ಅರುಣ ಶಹಾಪುರ ಮಾತನಾಡಿ, ಕಳೆದ 11 ಚುನಾವಣೆಗಳ ಮೂಲಕ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡ ರಮೇಶ ಜಿಗಜಿಣಗಿ ಪರ ಮತ ನೀಡಿ ಮೋದಿಯವರ ನಾಯಕತ್ವ ಬಲಪಡಿಸೋಣ ಎಂದರು.

ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಭೀಮನಗೌಡ ಸಿದರಡ್ಡಿ, ಈರಣ್ಣಾ ರಾವೂರ, ಶಿಲ್ಪಾ ಕುದರಗೊಂಡ, ಸಿದ್ದು ಬುಳ್ಳಾ, ಗಾಯತ್ರಿ ದೇವೂರ, ಮಳುಗೌಡ ಪಾಟೀಲ, ಪ್ರಕಾಶ ಡೋಣೂರಮಠ, ಶೇಖರಗೌಡ ಸಿದರಡ್ಡಿ, ಭೀಮನಗೌಡ ಲಚ್ಯಾಣ, ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಸಂಗಯ್ಯ ಮೇಲಿನಮಠ, ರಾಮನಗೌಡ ವರ್ಕಾನಳ್ಳಿ, ಕಾಶೀನಾಥ ಸುಂಬಡ, ಸಂಜೀವ ಹಾರವಾಳ, ಮಲ್ಕು ಬಾಗೇವಾಡಿ, ಸಾಹೇಬಗೌಡ ಬಿರಾದಾರ, ಸಿದ್ದು ಬೋರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT