ಪ್ರವರ್ಗ 2‘ಎ’ಗೆ ಸೇರಿಸಲು ಮರಾಠರ ಒತ್ತಾಯ

ಬಬಲೇಶ್ವರ: ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚಿರುವ ಮರಾಠಾ ಸಮುದಾಯದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು, ಪ್ರವರ್ಗ 2‘ಎ’ಗೆ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಬಬಲೇಶ್ವರ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬಬಲೇಶ್ವರ ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪರಿಷತ್ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್ ಘಾಟಗೆ, ರಾಜ್ಯ ಸರ್ಕಾರ ಮರಾಠಾ ಜಾತಿಯ ಶ್ರೇಯೋಭಿವೃದ್ಧಿಗಾಗಿ ನಿಗಮ ರಚನೆಗೆ ಆದೇಶ ನೀಡಿ, ₹ 50 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ಪ್ರವರ್ಗ 3 ‘ಬಿ’ ಯಿಂದ ಪ್ರವರ್ಗ 2‘ಎ’ಗೆ ಸೇರಿಸುವಂತೆ ಒತ್ತಾಯಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠಾ ಸಮುದಾಯದ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ ಚವ್ಹಾಣ ಮಾತನಾಡಿ, ರಾಜ್ಯದಲ್ಲಿ ಕನ್ನಡ ನಾಡು ನುಡಿಗಾಗಿ ಮರಾಠಾ ಜಾತಿಯ ಜನರು ತಮ್ಮದೇ ಆದ ಕೊಡುಗೆ ನೀಡಿದ್ದು, ಶತ ಶತಮಾನಗಳಿಂದ ಮರಾಠರು ಕನ್ನಡಿಗರೇ ಆಗಿ ಬದುಕುತ್ತಿದ್ದಾರೆ ಎಂದರು.
ಬಬಲೇಶ್ವರ ತಾಲ್ಲೂಕು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ನ ಅಧ್ಯಕ್ಷ ರಾಮು ಜಾಧವ, ಅಶೋಕ ವಿಧಾತೆ, ಸಿದ್ದು ಸೋನಾವಾಲೆ, ಕಲ್ಮೇಶ ಯಾದವ, ಮನೋಹರ ಯಾದವ, ರಾಮು ಭೋಸಲೆ, ಪರಶುರಾಮ ಸಿಂದೆ, ಮಾರುತಿ ಚವ್ಹಾಣ, ಹನುಮಂತ ಕದಮ, ಅಶೋಕ ಅವತಾಡೆ, ಪ್ರಭಾಕರ ಭೋಸಲೆ, ವಸಂತ ಜಗತಾಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.