ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ: ರಮೇಶ ಜಿಗಜಿಣಗಿ ಪರ ನಡಹಳ್ಳಿ ಮತಯಾಚನೆ

Published 3 ಮೇ 2024, 15:43 IST
Last Updated 3 ಮೇ 2024, 15:43 IST
ಅಕ್ಷರ ಗಾತ್ರ

ನಾಲತವಾಡ: ‘ನಮ್ಮ ಸಮುದಾಯದವರು ಮುಖ್ಯಮಂತ್ರಿ ಆಗುತ್ತಾರೆಂದು ಹಾಲುಮತದವರು ಮತ ಹಾಕಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿದರೆ, ನಮ್ಮ ಮುಖ್ಯಮಂತ್ರಿ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುವ ಮೂಲಕ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಮುಂದಿನ ಜನ್ಮದಲ್ಲಿ ಬೇಡ ಇದೇ ಜನ್ಮದಲ್ಲೇ ಸಿದ್ರಾಮುಲ್ಲಾ ಖಾನ್ ಆಗಿ‘ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ಇಲ್ಲಿಯ ಬಸವೇಶ್ವರ ವೃತ್ತದ ಬಳಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಮುಸ್ಲಿಮರೆಲ್ಲ ಗಟ್ಟಿ ನಿಲುವಿನಿಂದ ಕಾಂಗ್ರೆಸ್‌ಗೆ ಮತ ಹಾಕಿದಂತೆ ಹಿಂದೂಗಳು ಮಾತ್ರ ಬಿಜೆಪಿಗೆ ಮತ ಹಾಕುತ್ತಿಲ್ಲ. ಹೀಗಾಗಿಯೇ ನಾನು ಸೋಲು ಅನುಭವಿಸಿದೆ. ಕೇವಲ ಶೇ 13ರಷ್ಟು ಮುಸ್ಲಿಮರನ್ನು ಹೊಂದಿದ ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅವರನ್ನು ರಕ್ಷಿಸುತ್ತಾ ಅವರ ಕಾಳಜಿ ಮಾಡುತ್ತಿದೆ. ಇದರ ಪರಿಣಾಮ ಭಯೋತ್ಪಾದನೆ ಹೆಚ್ಚಾಗಿದೆ‘ ಎಂದು ದೂರಿದರು. 

‘ದೇಶದ ರಕ್ಷಣೆ ಹಾಗೂ ಹಿಂದುಗಳ ಹಿತಕ್ಕಾಗಿ ಮೋದಿ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು‘ ಎಂದು ಮನವಿ ಮಾಡಿದರು. 

ಜಿ.ಪಂ ಮಾಜಿ ಸದಸ್ಯ ಗಂಗಾಧರರಾವ್ ನಾಡಗೌಡ ಮಾತನಾಡಿ, ‘ಮತಕ್ಷೇತ್ರದಲ್ಲಿ ಈಗಿರುವ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿಲ್ಲ. ಕಾಂಗ್ರೆಸ್‌ನಿಂದಾಗಿ ರಾಜ್ಯ ದಿವಾಳಿಯಾಗಿದೆ’ ಎಂದು ದೂರಿದರು. 

ಶಾಸಕರಿಗೆ ಸವಾಲು:

‘ನಾನು ಶಾಸಕನಿದ್ದ ವೇಳೆ ಕಾಂಗ್ರೆಸ್‌– ಬಿಜೆಪಿ ಎನ್ನದೆ 800 ಮನೆಗಳನ್ನು ಮಂಜೂರು ಮಾಡಿಸಿದೆ. ಆದರೆ ಈಗಿರುವ ಶಾಸಕರು ತಾರತಮ್ಯ ಮಾಡುತ್ತಿದ್ದಾರೆ. ಈಗಿನ ಶಾಸಕರು ಆದರ್ಶದ ಮಾತುಗಳನ್ನು ಹೇಳುತ್ತಿದ್ದು ತಾವು ಒಳ್ಳೆಯವರಿದ್ದರೆ ನಾನು ಮಂಜೂರು ಮಾಡಿಸಿದ ಮನೆಗಳನ್ನು ಎಲ್ಲರಿಗೂ ಹಂಚಿಕೆ ಮಾಡಲಿ ನೋಡೋಣ‘ ಎಂದು ಸವಾಲು ಹಾಕಿದರು.????? (ಯಾರು)

ಇದೇ ವೇಳೆ ಮಾಜಿ ಶಾಸಕ ನಡಹಳ್ಳಿ ಅವರು ಅಪಾರ ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ವಿವಿಧೆಡೆ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿದರು. 

ಎಂ.ಎಸ್.ಪಾಟೀಲ, ಬಿ.ಎಂ.ತಾಳಿಕೋಟಿ ವಕೀಲರು, ಕೆ.ಆರ್.ಬಿರಾದಾರ, ಮುತ್ತು ಅಂಗಡಿ ಮಾತನಾಡಿದರು.

ನಾಲತವಾಡ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಡೆದ ಬಹಿರಂಗ ಸಭೆಯ ಮುನ್ನ ಮಾಜಿ ಶಾಸಕ ನಡಹಳ್ಳಿ ರೋಡ್ ಶೋ ನಡೆಸಿದರು
ನಾಲತವಾಡ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಡೆದ ಬಹಿರಂಗ ಸಭೆಯ ಮುನ್ನ ಮಾಜಿ ಶಾಸಕ ನಡಹಳ್ಳಿ ರೋಡ್ ಶೋ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT